ಯುನೈಟೆಡ್ ಕಾರ್ನಾಡು-2016 ಟ್ರೋಪಿ

ಮೂಲ್ಕಿ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಿಸ್ತು, ದೈಹಿಕ ಬಲ ವೃದ್ದಿಯಾಗುವುದರ ಜೊತೆಗೆ ಜ್ಞಾನದ ಬೆಳವಣೆಗೆಯೂ ಆಗುತ್ತದೆ ಎಂದು ಉದ್ಯಮಿ ರಂಜನ್ ಶೆಟ್ಟಿ ಕೆಂಪುಗುಡ್ಡೆ ಹೇಳಿದರು.
ಯುನೈಟೆಡ್ ಕಾರ್ನಾಡು ಇದರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ಕಾರ‍್ನಾಡು ಗಾಂಧೀ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಮಾರು 24 ತಂಡಗಳು ಭಾಗವಹಿಸಿತ್ತು ಅಂತಿಮವಾಗಿ ನಡೆದ ರೋಮಾಂಚಕಾರಿ ಪಂದ್ಯಾಟದಲ್ಲಿ ಸೆವೆನ್ ಸ್ಟಾರ್ ಕಾರ‍್ನಾಡು ತಂಡವು ಫ್ರೆಂಡ್ಸ್ ಕೊಪ್ಪಲ ತಂಡವನ್ನು 5 ರನ್ನುಗಳಿಂದ ಸೊಲಿಸಿ ಯುನೈಟೆಡ್ ಕಾರ್ನಾಡು ಟ್ರೋಪಿ ಹಾಗೂ 11,111ರೂವನ್ನು ತನ್ನದಾಗಿಸಿಕೊಂಡರೆ, ದ್ವಿತೀಯ ಸ್ಥಾನಿಯಾಗಿ ಫ್ರೆಂಡ್ಸ್ ಕೊಪ್ಪಲ ತಂಡವು 6,666ರೂ ಹಾಗೂ ಟ್ರೋಪಿಯಲ್ಲಿ ತೃಪ್ತಿಪಡೆಯಿತು. ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ರಹಿಮಾನ್, ಸರಣಿಶ್ರೇಷ್ಠ ಶಮೀರ್, ಉತ್ತಮ ಎಸೆತಗಾರ ಸರ್ಫ್ ಆಯ್ಕೆಯಾದರು. ಶ್ರೀಶ ಐಕಳ ಹಾಗೂ ಝಾಕೀರ್ ಹುಸೈನ್ ಕಾರ‍್ಯಕ್ರಮ ನಿರೂಪಿಸಿದರು.

Mulki-25011610

Comments

comments

Comments are closed.

Read previous post:
Mulki-25011607
ಮಾನಂಪಾಡಿ ದೈವಸ್ಥಾನ ವರ್ಷಾವಧಿ ನೇಮೋತ್ಸವ

ಮೂಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

Close