ರತ್ನಾಕರ ಶೆಟ್ಟಿಗೆ ರಂಗುದ ರತ್ನಾಕರೆ ಬಿರುದು ಪ್ರದಾನ

ಮೂಲ್ಕಿ: ರಂಗಭೂಮಿಯ ಮೇಲಿನ ಅಭಿಮಾನ ಬೆಳೆದಲ್ಲಿ ಸ್ಥಳೀಯ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸಬಹುದು, ನಮ್ಮೆಲ್ಲರ ನಡುವಿನ ಸಾಧಕ ಕಲಾವಿದನನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ತುಳು ಭಾಷೆ ವಿಶ್ವಮಟ್ಟಕ್ಕೆ ರಾರಾಜಿಸಲು ತುಳು ರಂಗಭೂಮಿಯ ಕೊಡುಗೆ ಅಪಾರ ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಹೇಳಿದರು.
ಅವರು ಮೂಲ್ಕಿಯ ಬಪ್ಪನಾಡುವಿನಲ್ಲಿ ವಿಜಯಾ ಕಲಾವಿದರ ಅಭಿಮಾನಿ ಬಳಗದ ನೇತೃತ್ವದಲ್ಲಿ ನಡೆದ ಉಚಿತ ತುಳುನಾಟಕ ಪ್ರದರ್ಶನದಲ್ಲಿ ಹಿರಿಯ ಕಲಾವಿದರಾದ ರತ್ನಾಕರ ಶೆಟ್ಟಿಯವರಿಗೆ ರಂಗುದ ರತ್ನಾಕರೆ ಬಿರುದನ್ನು ನೀಡಿ ಗೌರವಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಹಿರಿಯ ರಂಗಕರ್ಮಿ ಮೂಲ್ಕಿ ಚಂದ್ರಶೇಖರ ಸುವರ್ಣ, ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ, ಮೂಲ್ಕಿ ಬಂಟರ ಸಂಘದ ಯುವ ಸಂಘಟನಾ ವಿಭಾಗದ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾನಂಪಾಡಿ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಶಮಿನಾ ಆಳ್ವಾ, ಮೂಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಬಬಿತಾ ಯು. ಶೆಟ್ಟಿ, ಸರಿತಾ ಆರ್. ಶೆಟ್ಟಿ, ನಾಟಕದ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ, ಕಲಾವಿದರಾದ ರೋಹಿತ್ ಶೆಟ್ಟಿ ಹೆಜಮಾಡಿ, ಹರೀಶ್ ಪಡುಬಿದ್ರಿ, ಸೀತಾರಾಮ ಶೆಟ್ಟಿ ಎಳತ್ತೂರು, ಹರಿಪ್ರಸಾದ್ ನಂದಳಿಕೆ, ಭಗವಾನ್ ಸುರತ್ಕಲ್, ಚಿತ್ರಲೇಖಾ, ರೇಖಾ ಸುನಿಲ್ ಕೆಂಚನಕೆರೆ, ದಿನೇಶ್ ಮುಂಡ್ಕೂರು, ಪ್ರದೀಪ್ ನಂದನಕೆ, ಅಕ್ಷಿತ್ ಏಳಿಂಜೆ, ಸುಧಾಕರ ಸಾಲ್ಯಾನ್, ನಿತಿನ್ ಶೆಟ್ಟಿ ಕಟೀಲು, ಜ್ಯೋತಿ ಕೆಂಚನಕೆರೆ, ಚೈತ್ರಾ ಕಿನ್ನಿಗೋಳಿ, ಅರುಣಾ ನಂದಳಿಕೆ, ಜಯರಾಜ್ ಹೆಜ್ಮಾಡಿ ಉಪಸ್ಥಿತರಿದ್ದರು.
ಕಿನ್ನಿಗೋಳಿ ವಿಜಯ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಕಿನ್ನಿಗೋಳಿ ಸ್ವಾಗತಿಸಿ ಪ್ರಸ್ತಾವನೆಗೈದರು, ಸೀತಾರಾಮ ಶೆಟ್ಟಿ ಎಳತ್ತೂರು ವಂದಿಸಿದರು, ಪತ್ರಕರ್ತ ಕಲಾವಿದ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Mulki-25011602

Comments

comments

Comments are closed.