ಪಕ್ಷಿಕೆರೆ ಧಾರ್ಮಿಕ ಪ್ರವಚನ

ಕಿನ್ನಿಗೋಳಿ: ಸಮುದಾಯದಲ್ಲಿ ಪ್ರಮಾಣಿಕತೆ ಮತ್ತು ಐಕ್ಯತೆಯ ಕೊರತೆ ಹೆಚ್ಚಿದೆ. ಅದನ್ನು ನೀಗಿಸಲು ಯುವ ಜನತೆ ಮುಂದಡಿಇಡಬೇಕು ಎಂದು ಬಿ.ಜೆ.ಎಂ. ಪಕ್ಷಿಕೆರೆ ಖತೀಬ್ ಅಲ್‌ಹಾಜ್ ಅಬ್ದುಲ್ ಖಾದರ್ ಮದನಿ, ಇಸ್ಲಾಂ ಶಾಂತಿ, ಪ್ರೀತಿ, ಸಹೋದರತೆಯನ್ನು ವಿಶ್ವಕ್ಕೆ ಸಾರಿದ ಧರ್ಮ ಹೇಳಿದರು.
ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ (ರಿ) ಹಾಗೂ ರಿಯಾಲುಲ್ ಇಸ್ಲಾಂ ಜಮಾಅತ್ ಕಮಿಟಿಗಳ ಆಶ್ರಯದಲ್ಲಿ ಶನಿವಾರ ನಡೆದ 35ನೇ ವರ್ಷದ ರಿಫಾಇಯಾ ದಫ್ ರಾತೀಬ್ ಹಲ್ಕಾ, ಜಲಾಲಿಯಾ ರಾತೀಬ್ ಹಾಗೂ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.
ಬಿ.ಜೆ.ಎಂ. ಪಕ್ಷಿಕೆರೆ ಅಧ್ಯಕ್ಷ ಕೆ.ಯು. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾಪುರ ಕೇಂದ್ರ ಜುಮಾ ಮಸೀದಿ ಖತೀಬ್ ಉಮರ್ ಫಾರೂಕ್ ಸಖಾಪಿ, ಅಲ್‌ಹಾಜ್ ಇಬ್ನ್ ಮೌಲಾನಾ ತಂಘಳ್ ಅಬ್ದುಲ್ ಕರೀಂ ಸಖಾಫಿ, ಕಿನ್ನಿಗೋಳಿ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಸಖಾಫಿ, ಮಾಜೀ ಖತೀಬ್ ಡಿ. ಜೆ. ಮುಹ್ಮಮದ್ ಮುಸ್ಲಿಯಾರ್, ಶರೀಫ್ ಖಾಸಿಮಿ, ಅಶ್ರಫ್ ಅಂಜದಿ, ಮುಸ್ತಫಾ ಝೈನಿ, ಕಲಂದರ್ ಸದಿ, ಹಾಜೀ ಮೀರಾನ್ ತೌಫೀಕ್, ಅಬ್ದುಲ್ ಹಮೀದ್, ತೌಫೀಕ್ ಬಾವ, ಹಾಜೀ ಅಬ್ದುಲ್ ಲತೀಫ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-26011604

Comments

comments

Comments are closed.