ಸನ್ಮಾರ್ಗಸಿದ್ಧಿಗೆ ಶ್ರಮ ವಹಿಸಬೇಕು

ಮೂಲ್ಕಿ: ಧಾರ್ಮಿಕ ನಿಯಮ ಪಾಲನೆಯ ಲೋಪ ಹಾಗೂ ತಪ್ಪು ತಿಳುವಳಿಕೆಗಳು ಯುವ ಜನಾಂಗವನ್ನು ದಾರಿತಪ್ಪಿಸುತ್ತಿದ್ದು ಹಿರಿಯರು ಧರ್ಮ ಗುರುಗಳು ಯುವ ಸಮಾಜವನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು.ಮೂಲ್ಕಿ ಶಾಫಿ ಜುಮಾ ಮಸೀದಿ ಇದರ ಆಶ್ರಯದಲ್ಲಿ ಆರ್ಥಿಕ ದುಸ್ಥಿತಿಯ ಜನರಿಗಾಗಿ ನೂತನ ವಸತಿ ಸಮುಚ್ಚಯ,ಕುರ್ ಆನ್ ಅಧ್ಯಯನ ಕೇಂದ್ರ ಹಿಫ್ಲುಲ್ ಕುರ್ ಆನ್ ಮತ್ತು ಯತೀಂಖಾನಾ ಕಟ್ಟಡಕ್ಕೆ ಶಿಲಾನ್ಯಾಸ ಗೈದು ಬಳಿಕ ಕಾರ್ನಾಡು ಮಸ್ಜಿದುನ್ನೂರ್ ಮಸೀದಿಯ ಬಳಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮೂಲ್ಕಿಯಲ್ಲಿ ನಡೆಯುವ ಧಾರ್ಮಿಕ ಜೀವನಕ್ಕೆ ಪೂರಕ ಈ ಮಹತ್ತರವಾದ ದೀನೀ ಕಾರ್ಯದಲ್ಲಿ ಸರ್ವರೂ ತಮ್ಮನ್ನು ತೊಡಗಿಸಿಕೊಳ್ಳವ ಜೊತೆಗೆ ಸನ್ಮಾರ್ಗಸಿದ್ಧಿಗೆ ಶ್ರಮ ವಹಿಸಬೇಕು ಎಂದರು. ಧಾರ್ಮಿಕ ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಲ್‌ಹಾಜಿ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟನೆ ಗೈದು ದುವಾ ಆಶೀರ್ವಚನ ಗೈದರು. ಯೇನಪೊಯ ಗ್ರೂಪ್‌ನ ವೈ. ಮುಹಮ್ಮದ್ ಕುಂಞಿ, ಮಾತನಾಡಿ, ಧಾರ್ಮೀಕ ಶಿಕ್ಷಣ ಮನುಷ್ಯರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಈ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಯನ್ನು ನಿರ್ಮಿಸುವುದು ನಾಗರೀಕರ ಆದ್ಯ ಕರ್ತವ್ಯ ಜೊತೆಗೆ ಆರ್ಥಿಕ ದುಸ್ಥಿತಿಯ ಜನರಿಗಾಗಿ ನಡೆಸುವ ಯತೀಂಖಾನಾ ಸಹಿತ ಹಲವು ಯೋಜನೆಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಸಂಚಾಲಕ ಹುಸೈನ್ ದಾರಿಮಿ ರೇಂಜಲಾಡಿ ಮುಖ್ಯ ಪ್ರಭಾಷಣ ಗೈದರು. ಮೂಲ್ಕಿ ಶಾಫಿ ಜುಮಾ ಮಸೀದಿ ಜಮಾಆತ್ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಮೂಲ್ಕಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸುಮಾರು ೩ಕೋಟಿ ರೂ ವೆಚ್ಚದಲ್ಲಿ ಆರ್ಥಿಕ ದುಸ್ಥಿತಿಯ ಸಮಾಜ ಭಾಂದವರ ಸಹಕಾರಕ್ಕೆ ಈ ಯೋಜನೆ ರೂಪಿಸಲಾಗಿದ್ದು ಜಮಾಆತ್ ಸದಸ್ಯರು ಮತ್ತು ದಾನಿಗಳು ಈ ಬಗ್ಗೆ ಸಹಕರಿಸಬೇಕು ಎಂದರು.ಮಾಜಿ ಸಚಿವ ಅಮರನಾಥ ಶೆಟ್ಟಿ,ಉದ್ಯಮಿ ಜೀವನ್ ಶೆಟ್ಟಿ,ವಕ್ತ್ ಅಧಿಕಾರಿ ಅಬೂಬಕ್ಕರ್ ಕೈರಂಗಳ. ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ದಾರಿಮಿ, ಕಾರ್ನಾಡು ಮಸೀದಿಯ ಬದ್ರುದ್ದೀನ್ ದಾರಿಮಿ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ, ಹಾಜೀ ಸೈಯದ್ ಕರ್ನಿರೆ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉದ್ಯಮಿ ಇನಾಯತ್ ಅಲಿ ಮುಲ್ಕಿ,ಎಂಕೆ.ಮೊಹಮ್ಮದ್ ಬಾವಾ,ಎಚ್.ಅಬೂಬಕ್ಕರ್,ಅಬ್ಬಾಸ್ ಆಲಿ, ,ಬಿ.ಎಂ.ಆಸೀಪ್, , ಕೆ.ಎಂ. ಬಾವಾ ಎಸ್ಕೋಡಿ,ಬಿ.ಕೆ ಅದ್ದು,ಅಬದುಲ್ ಖಾದರ್ ಬಾವಾ,ಅಬ್ದುಲ್ಲಾ ದಾರಿಮಿ,ಫರೂಕ್ ಹಾಜಿ,ಅಬದುಲ್ ಹಕೀಂ,ಎಂ.ಕೆ ಹಮೀದ್ ನಾಲೂರು ಬಾವಿಙ್ಞ ಮತ್ತಿತರರು ಉಪಸ್ಥಿತರಿದ್ದರು.

Mulki-26011602

Comments

comments

Comments are closed.

Read previous post:
Kinnigoli-26011601
ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನ ದೀಪ ಪೂಜೆ

ಕಿನ್ನಿಗೋಳಿ: ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದುರ್ಗಾಶಕ್ತಿ ಕೆಮ್ರಾಲ್ ಮಂಡಲ ವತಿಯಿಂದ ದೀಪ ಪೂಜಾ ಕಾರ್ಯಕ್ರಮ ನಡೆಯಿತು, ಮೂಳ್ಳೇರಿಯಾ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಕಾರ್ಯಕ್ರಮ ನಡೆಸಿಕೊಟ್ಟರು.

Close