67ನೇ ಗಣರಾಜ್ಯೋತ್ಸವದ ಧ್ವಜಾರೋಹಣ

ಮೂಲ್ಕಿ: ಯುವ ಪೀಳಿಗೆ ದೇಶದ ಭವಿಷ್ಯವಾಗಿದ್ದು ಯುವ ಪೀಳೀಗೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ವಿವೇಕಾನಂದ ಜಯಂತಿಯನ್ನು ಯುವ ಜನೋತ್ಸವವಾಗಿ ಆಚರಿಸುತ್ತ್ತಿದ್ದು ಯುವ ಜನತೆ ಯಾವುದೇ ವ್ಯಾಮೋಹಕ್ಕೆ ಬಲಿಯಾಗದೇ ದೇಶವನ್ನು ಬಲಿಷ್ಥಗೊಳಿಸಲು ಪ್ರಯತ್ನಿಸಬೇಕೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವಕೆ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ನಗರ ಪಂಚಾಯತ್ ವತಿಯಿಂದ ಮೂಲ್ಕಿಯ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ಜರಗಿದ 67ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದ ಆವರು ಮೂಲ್ಕಿಯು ವೇಗವಾಗಿ ಬೆಳೆಯುತ್ತಿದ್ದು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು ಶೀಫ್ರದಲ್ಲಿ ಮೂಲ್ಕಿಗೆ ಪೂರ್ಣ ಪ್ರಮಾಣದ ತಹಶೀಲ್ದಾರ್ ನೇಮಕ ಮಾಡಿ ಮೂಲ್ಕಿ ತಾಲೂಕು ರಚನೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಯವರ ಬೆಳ್ಳಿ ಪದಕ ಪುರಸ್ಕ್ರತರಾದ ದ.ಕ.ಜಿಲ್ಲಾ ಗೃಹ ರಕ್ಷಕ ದಳದ ಮೂಲ್ಕಿ ಘಟಕದ ಸೀನಿಯರ್ ಫ್ಲಟೂನ್ ಕಮಾಂಡರ್ ಎಚ್ ಮನ್ಸೂರ್ ರನ್ನು ಸನ್ಮಾನಿಸಲಾಯಿತು.ಶೇಕಡಾ 24.1 ನಿಧಿಯಲ್ಲಿ ಮನೆ ನಿಮಾರ್ಣಕ್ಕೆ ಗೀತಾರಿಗೆ ರೂ 70,000 ಸಹಾಯ ಧನ ಹಾಗೂ ಇತರ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
2015 ರಲ್ಲಿ ನವ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ ಎನ್ ಸಿ ಸಿ ನೇವಲ್ ಕೆಡೆಟ್ ಗಳನ್ನು ಗೌರವಿಸಲಾಯಿತು.ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೂಲ್ಕಿಯ ಶ್ರೀ ನಾರಾಯಣ ಗುರು ಕಾಲೇಜಿನ ವರುಣ್ ಎಂ ಬಂಗೇರ, ಸಿ ಎಸ್ ಐ ಆಂಗ್ಲ ಮಾಧ್ಯಮ ಶಾಲೆಯ ಶ್ರಾವ್ಯ ಮತ್ತು ರಾಷ್ತ್ರ ಮಟ್ಟದ ಕರಾಟೆ ಸ್ಪರ್ಧೇಯಲ್ಲಿ ಪ್ರಥಮ ಸ್ಥಾನ ಪಡೆದ ಕಿಲ್ಪಾಡಿ ಬೆಥನಿ ಆಂಗ್ಲ ಮಾಧ್ಯಮ ಶಾಳೆಯ ಸಾಮ್ರಾಟ್ ಬಿ ಹೆಗ್ಡೆಯವರನ್ನು ಗೌರವಿಸಲಾಯಿತು.
ಮೂಲ್ಕಿಯ ಪೋಲಿಸ್ ಸಿಬಂದಿ, ಗೃಹ ರಕ್ಷಕ ದಳ, ಮೂಲ್ಕಿಯ ವಿಜಯ ಕಾಲೇಜಿನ ಎನ್ ಸಿ ಸಿ, ನೇವಲ್ ಮತ್ತು ಮೂಲ್ಕಿಯ ವಿವಿಧ ಶಾಲೆಯ ಎನ್ ಸಿ ಸಿ, ನೇವಲ್, ಸ್ಕೌಟ್ಸ್, ಗೈಡ್ಸ್ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.
ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷೆ ವಸಂತಿ ಭಂಡಾರಿ,ಮೂಲ್ಕಿಯ ಪ್ರಭಾರ ವಿಶೇಚ ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಮೂಲ್ಕಿ ಪೋಲಿಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್, ಯುನೈಟೆಡ್ ಕಿಂಗ್ ಡಮ್ ನ ಪ್ರಸಿದ್ದ ವೈದ್ಯ ಮೂಲ್ಕಿ ಡಾ ಹಂಸರಾಜ್ ಶೆಟ್ಟಿ ಜಿ.ಎಂ ಮತ್ತಿತರರು ಉಪಸ್ತಿತರಿದ್ದರು.
ಮೂಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ ಸ್ವಾಗತಿಸಿದರು, ಮುಖ್ಯಾಧಿಕಾರಿ ವಾಣಿ ಆಳ್ವ ವಂದಿಸಿದರು, ಭಾಸ್ಕರ ಹೆಗ್ಡೆ ನಿರೂಪಿಸಿದರು.

Mulki-26011606Mulki-26011607Mulki-26011608 Mulki-26011609

Comments

comments

Comments are closed.