ನೀರಿನ ಟ್ಯಾಂಕ್‌ಗೆ ಬಿದ್ದು ವ್ಯಕ್ತಿ ಮೃತ್ಯು

ಬಜ್ಪೆ: ನೀರಿನ ಟ್ಯಾಂಕ್‌ಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಶಾಂತಿಗುಡ್ದೆ ಎಂಬಲ್ಲಿ ನಡೆದಿದೆ
ಮೃತಪಟ್ಟ ವ್ಯಕ್ತಿಯನ್ನು ಬಜಪೆ ಸಮೀಪದ ಕಳವಾರಿನ ಎಮ್.ಎಸ್.ಇ.ಝಡ್ ಕಾಲೋನಿ ನಿವಾಸಿ ಸದಾಶಿವ ಶೆಟ್ಟಿ ಎಂದು ಗುರುತಿಸಲಾಗಿದೆ. ವರ್ಷದ ಹಿಂದೆ ಕಾಲನಿಗಾಗಿ ಎಮ್.ಎಸ್.ಇ.ಝಡ್‌ನವರೇ ನಿರ್ಮಿಸಿದ 2 ಲಕ್ಷ ಲೀಟರ್ ಬ್ರಹತ್ ಒವರ್ ಹೆಡ್ ಟ್ಯಾಂಕ್ ಇದಾಗಿದ್ದು ಸದಾಶಿವ ಶೆಟ್ಟಿ ಎಮ್.ಎಸ್.ಇ.ಝಡ್ ಬಜ್ಪೆ ಕಾಲೋನಿ ಪಂಪು ಅಪರೇಟರ್ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಶನಿವಾರದಿಂದ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಕಾಲೋನಿಗೆ ನೀರಿಲ್ಲದೆ ಸದಾಶಿವ ಶೆಟ್ಟಿಯನ್ನು ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಬಜ್ಪೆ ಕಾಲೋನಿಯ ನೀರಿನ ಟ್ಯಾಂಕ್‌ ಕೆಳಗೆ ಪಾದರಕ್ಷೆ ಕಂಡು ಅನುಮಾನಗೊಂಡು ಟ್ಯಾಂಕ್‌ ಪರೀಕ್ಷಿಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮಂಗಳೂರು ಅಗ್ನಿಶಾಮಕ ಹಾಗೂ ಗ್ರಾಮಸ್ಥರ ಸಹಾಯದಿಂದ ಮೇಲೆತ್ತಲಾಗಿದ್ದು ಕುಡಿತದ ಚಟ ಹೊಂದಿದ್ದ ಸದಾಶಿವ ಶೆಟ್ಟಿಯವರು ನೀರು ನೋಡಲು ಹೋಗಿ ಕಾಲುಜಾರಿ ಬಿದ್ದಿರುವ ಸಾದ್ಯತೆ ಇದೆ ಎನ್ನಲಾಗಿದೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bajpe-27011602 Bajpe-27011603 Bajpe-27011604

Comments

comments

Comments are closed.

Read previous post:
Mulki-27011601
ತಂತ್ರಜ್ಞಾನ ಸ್ಪರ್ಧೆ ವಿಜ್ ಐಟಿ-2ಕೆ16 ಟೆಕ್‌ಪಾರ್ವ್

ಮೂಲ್ಕಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪ್ರಾಪಂಚಿಕ ಅರಿವು ಬಹಳ ಮುಖ್ಯ ಆಧುನಿಕ ತಂತ್ರಜ್ಞಾನದ ಪರಿಚಯ ಹಾಗೂ ಅನುಭವವು ಮಾಹಿತಿ ತಂತ್ರಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಸಾಧ್ಯವಾಗಲಿದೆ ಎಂದು ಅಕಾಡಮಿ...

Close