ತಂತ್ರಜ್ಞಾನ ಸ್ಪರ್ಧೆ ವಿಜ್ ಐಟಿ-2ಕೆ16 ಟೆಕ್‌ಪಾರ್ವ್

ಮೂಲ್ಕಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪ್ರಾಪಂಚಿಕ ಅರಿವು ಬಹಳ ಮುಖ್ಯ ಆಧುನಿಕ ತಂತ್ರಜ್ಞಾನದ ಪರಿಚಯ ಹಾಗೂ ಅನುಭವವು ಮಾಹಿತಿ ತಂತ್ರಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಸಾಧ್ಯವಾಗಲಿದೆ ಎಂದು ಅಕಾಡಮಿ ಆಪ್ ಜನರಲ್ ಎಜ್ಯುಕೇಶನ್ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಕಂಪ್ಯೂಟರ್ ವಿಭಾಗದ ಆಶ್ರಯದಲ್ಲಿ ನಡೆದ ಅಂತರ್ ಹೈಸ್ಕೂಲು ವಿಭಾಗ ಮಾಹಿತಿ ತಂತ್ರಜ್ಞಾನ ಸ್ಪರ್ಧೆ ವಿಜ್ ಐಟಿ-2ಕೆ16 ಟೆಕ್‌ಪಾರ್ವ್ ಸಮೂಹದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ವಿಶ್ವಸ್ಥ ಮಂಡಳಿ ಸದಸ್ಯ ವಿ.ಶಿವರಾಮ ಕಾಮತ್ ಮಾತನಾಡಿ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಇಂದು ಪ್ರಪಂಚ ಒಂದು ಮನೆಯಂತಾಗಿದೆ ತಂತ್ರಜ್ಞಾನದ ಉಪಯೋಗವನ್ನು ಧಾನಾತ್ಮಕವಾಗಿಸಿಕೊಂಡಲ್ಲಿ ಜೀವನದಲ್ಲಿ ಸಾಧನೆ ಸುಲಭ ಸಾಧ್ಯ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್, ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಶೋಧನ್ ಶೆಟ್ಟಿ, ಕಂಪ್ಯೂಟರ್ ಸಂಘದ ಕಾರ್ಯದರ್ಶಿ ಧೀರಜ್ ಡಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಥಮ ಪ್ರಶಸ್ತಿ (ಚಾಂಪಿಯನ್‌ಶಿಪ್) ಮೂಲ್ಕಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆ ಪಡೆದುಕೊಂಡಿತು. ದ್ವಿತೀಯ ಪ್ರಶಸ್ತಿ ತೋಕೂರು ತಪೋವನ ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾದ್ಯಮ ಶಾಲೆ ಗಳಿಸಿತು.
ಫಲಿತಾಂಶ: ಐಸ್ ಬ್ರೇಕರ್(ಪ್ರಥಮ): ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಮೂಲ್ಕಿ.ದ್ವಿತೀಯ: ಸಾಗರ್ ವಿದ್ಯಾಮಂದಿರ ಪಡುಬಿದ್ರಿ.
ಆಡ್-ಒ-ಮೇಡ್ (ಪ್ರಥಮ): ಹೋಲಿ ಪ್ಯಾಮಿಲಿ ಸ್ಕೂಲ್ ಸುರತ್ಕಲ್.ದ್ವಿತೀಯ: ಶ್ರೀ ವ್ಯಾಸ ಮಹರ್ಷಿ ಮೂಲ್ಕಿ.
ಬ್ರೈನ್ ರ್ಸ್ಟೋಮ್(ಪ್ರಥಮ): ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿನ್ನಿಗೋಳಿ.ದ್ವಿತೀಯ: ತೋಕೂರು ತಪೋವನ ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾದ್ಯಮ ಶಾಲೆ.
ಶೆರ‍್ಲೋಕ್ಡ್ ಪ್ರಥಮ: ತೋಕೂರು ತಪೋವನ ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾದ್ಯಮ ಶಾಲೆ.
ಲೇನ್ವಾರ್ ಪ್ರಥಮ: ಶ್ರೀ ವ್ಯಾಸ ಮಹರ್ಷಿ ಮೂಲ್ಕಿ. ದ್ವಿತೀಯ:ಹೋಲಿ ಫ್ಯಾಮಿಲಿ ಸುರತ್ಕಲ್.
ದ ಅಲ್ಟಿಮೇಟ್ ಪ್ಲೇಯರ್ ಪ್ರಥಮ: ಶ್ರೀ ವ್ಯಾಸ ಮಹರ್ಷಿ ಮೂಲ್ಕಿ. ದ್ವಿತೀಯ: ತೋಕೂರು ತಪೋವನ ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾದ್ಯಮ ಶಾಲೆ ಗಳಿಸಿದೆ.

Mulki-27011601

Comments

comments

Comments are closed.

Read previous post:
Mulki-26011606
67ನೇ ಗಣರಾಜ್ಯೋತ್ಸವದ ಧ್ವಜಾರೋಹಣ

ಮೂಲ್ಕಿ: ಯುವ ಪೀಳಿಗೆ ದೇಶದ ಭವಿಷ್ಯವಾಗಿದ್ದು ಯುವ ಪೀಳೀಗೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ವಿವೇಕಾನಂದ ಜಯಂತಿಯನ್ನು ಯುವ ಜನೋತ್ಸವವಾಗಿ ಆಚರಿಸುತ್ತ್ತಿದ್ದು ಯುವ ಜನತೆ ಯಾವುದೇ ವ್ಯಾಮೋಹಕ್ಕೆ...

Close