ಕಟೀಲು ರಾಷ್ಟ್ರ ಮಟ್ಟದ ಸಂಸ್ಕೃತ ವಿಚಾರ ಗೋಷ್ಠಿ

Kinnigoli-28011601

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ದೇವಳದ ಆಡಳಿತಕ್ಕೊಳಪಟ್ಟ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಕಟೀಲು ಹಾಗೂ ಉ. ಕ. ಶಿರಸಿಯ ಸಂಸ್ಕೃತ ಶೋಧ ಸಂಸ್ಥಾನ ( ಸಂಶೋಧನ ) ಜಂಟಿಯಾಗಿ ಜನವರಿ 30 ಹಾಗೂ 31 ರಂದು ರಾಷ್ಟ್ರ ಮಟ್ಟದ ಸಂಸ್ಕೃತ ವಿಚಾರ ಗೋಷ್ಠಿ ಅಯೋಜಿಸಿದೆ ಎಂದು ದೇವಳದ ಮೊPಸರ ವಾಸುದೇವ ಆಸ್ರಣ್ಣ ಹಾಗೂ ಶಿರಸಿ ಸಂಸ್ಕೃತ ಶೋಧ ಸಂಸ್ಥಾನ ಸಂಸ್ಥೆಯ ಡಾ| ಜಿ. ಎನ್. ಭಟ್ ಕಟೀಲಿನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕೃತ ಭಾಷೆಯ ಕುರಿತಾಗಿ ಆಸಕ್ತಿ ಅಧ್ಯಯನಗಳು ಹೆಚ್ಚಾಗುತ್ತಿರುವ ಹಾಗೂ ಸಂಸ್ಕೃತ ಕುರಿತು ಸರಿಯಾದ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ನಡೆಯುವ ವಿಚಾರ ಗೋಷ್ಠಿಯಲ್ಲಿ ರಾಷ್ಟ್ರ ಮಟ್ಟದ ಹಿರಿಯ ಸಂಸ್ಕೃತ ವಿದ್ವಾಂಸರು, ಚಿಂತಕರು ಭಾಗವಹಿಸಲಿದ್ದಾರೆ ಹಾಗೂ ಸಂಸ್ಕೃತ ಸಾಹಿತ್ಯಾಧ್ಯಯನದಲ್ಲಿ ಹಾಗೂ ಸಂಶೋಧನೆಯಲ್ಲಿ ಇತ್ತೀಚಿನ ಬೆಳವಣಿಗೆ ಹಾಗೂ ಒಲವುಗಳು ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಪ್ರಿನ್ಸಿಪಾಲ್ ಡಾ. ಎಂ. ಪದ್ಮನಾಭ ಮರಾಠೆ, ಪ್ರಾಧ್ಯಾಪಕ ಡಾ| ನಾಗರಾಜ ಬಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Bajpe-27011602
ನೀರಿನ ಟ್ಯಾಂಕ್‌ಗೆ ಬಿದ್ದು ವ್ಯಕ್ತಿ ಮೃತ್ಯು

ಬಜ್ಪೆ: ನೀರಿನ ಟ್ಯಾಂಕ್‌ಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಶಾಂತಿಗುಡ್ದೆ ಎಂಬಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿಯನ್ನು ಬಜಪೆ ಸಮೀಪದ ಕಳವಾರಿನ ಎಮ್.ಎಸ್.ಇ.ಝಡ್ ಕಾಲೋನಿ...

Close