ಹಳೆವಿದ್ಯಾರ್ಥಿ ಸಂಘ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ: ತೋಕೂರು ತಪೋವನ ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ಡಾ. ಎಂ ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಶಾಲೆ ಹಳೆವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಿಮಾಂಶು ಎಮ್ ಹೆಗ್ಡೆ, ಉಪಾಧ್ಯಕ್ಷ ವಿನಿತ್ ಎನ್ ಮತ್ತು ರೀನ ಎಡ್ನ ಡಿಸೋಜ, ಕಾರ್ಯದರ್ಶಿ ಗಣೇಶ್ ಪ್ರಸಾದ್, ಜೊತೆ ಕಾರ್ಯದರ್ಶಿ ಆದಿತ್ಯ, ಕೋಶಾಧಿಕಾರಿ ವಿಪಿನ್ ಎನ್, ಪೋಷಕ ಸಲಹೆಗಾರ ವಾಸುನಾಯಕ್, ಶಿಕ್ಷಕ ಸಲಹೆಗಾರ ಆಶಾ ರಾಮ್‌ದಾಸ್ ಕಾಮತ್ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಲತಾ ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ ಹಾಗೂ ಶಿಕ್ಷಕ ರಕ್ಷಕ ಸಂಘದ ಸಲಹೆಗಾರ ಸಮಿತಿಯ ಸದಸ್ಯ ಯಾದವ ದೇವಾಡಿಗ ಹಾಗೂ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Kinnigoli-28011604

Comments

comments

Comments are closed.

Read previous post:
Kinnigoli-28011603
ಅನಾರೋಗ್ಯ ಪೀಡಿತ ಬಸ್ಸು ಚಾಲಕ – ಸಹಾಯಧನ

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘ (ರಿ.) ಇವರ ವತಿಯಿಂದ ಅನಾರೋಗ್ಯ ಪೀಡಿತ ಬಸ್ಸು ಚಾಲಕ ಶ್ರೀಕಾಂತ್ ಅವರಿಗೆ ರೂ.೧೫,೦೦೦ ಸಹಾಯಧನ ಹಸ್ತಾಂತರಿಸಲಾಯಿತು. ಈ ಸಂದರ್ಭ...

Close