ಕಟೀಲು : ರಾಷ್ಟ ಮಟ್ಟದ ವಿಚಾರ ಗೋಷ್ಟಿ

ಕಿನ್ನಿಗೋಳಿ: ಯುವ ಚೇತನಗಳು ಸಂಸ್ಕ್ರತ ಭಾಷೆಯನ್ನು ಸಂಪ್ರದಾಯಬದ್ದವಾಗಿ ಕಲಿತು ಮುಂದಿನ ಪೀಳಿಗೆಗಳಿಗೆ ಪ್ರೇರಕರಾಗುವಂತೆ ಮುಂದುವರಿಸಿಕೊಂಡು ಹೋಗಬೇಕು ಎಂದು ಕಟೀಲು ದೇವಳದ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ದೇವಳದ ಆಡಳಿತಕ್ಕೊಳಪಟ್ಟ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಕಟೀಲು ಹಾಗೂ ಉ. ಕ. ಶಿರಸಿಯ ಸಂಸ್ಕೃತ ಶೋಧ ಸಂಸ್ಥಾನ ( ಸಂಶೋಧನ ) ಜಂಟಿಯಾಗಿ ಶನಿವಾರ ಕಟೀಲು ಶ್ರೀ ದುರ್ಗಾ ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸಂಸ್ಕೃತ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ವೈದಿಕ ವಿಜ್ಞಾನದ ಬೆಂಗಳೂರು ಅಗ್ರಗಾಮಿ ಸಮೂಹ ಸಂಸ್ಥೆಗಳ ನಿರ್ದೆಶಕ ಎಚ್. ಆರ್ ಸತೀಶ್ಚಂದ್ರ ಮಾತನಾಡಿ ವೇದ ಮೂಲಗಳು, ಸಂಸ್ಕೃತಿ, ಸಂಸ್ಕ್ರತ ಆರ್ಯುವೇದ ಯೋಗ, ಯಾಗ ಯಜ್ಞಗಳ ಬಗ್ಗೆ ವೈಜ್ಞಾನಿಕ ಚಿಂತನೆ ಅಗತ್ಯ. ಪಾಶ್ಚ್ಯಾತ ಅನುಕರಣೆಗಳ ಈ ಕಾಲ ಘಟ್ಟದಲ್ಲಿ ಜನರಲ್ಲಿ ತಿಳಿ ಹೇಳಬೇಕಾದ ಕಾಲ ಅನಿರ್ವಾಯವಾಗಿದೆ. ಎಂದು ಸಂಪನ್ಮೂಲ ವ್ಯಕಿಯಾಗಿ ಮಾತನಾಡಿದರು.
ವಿಚಾರ ಗೋಷ್ಠಿಯಲ್ಲಿ ವಿವಿಧ ರಾಜ್ಯಗಳ ರಾಷ್ಟ್ರ ಮಟ್ಟದ ಹಿರಿಯ ಸಂಸ್ಕೃತ ವಿದ್ವಾಂಸರು, ಚಿಂತಕರು ಸಂಸ್ಕೃತ ಸಾಹಿತ್ಯಾಧ್ಯಯನದಲ್ಲಿ ಹಾಗೂ ಸಂಶೋಧನೆಯಲ್ಲಿ ಇತ್ತೀಚಿನ ಬೆಳವಣಿಗೆ ಹಾಗೂ ಒಲವುಗಳು ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡನೆ ಹಾಗೂ ಚರ್ಚೆ ನಡೆಸಿದರು.
ಈ ಸಂದರ್ಭ ಕಟೀಲು ದೇವಳದ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ, ಪ್ರೊ. ಶೀನಿವಾಸ್ ವರ್ಕೇಡಿ ಉಪಸ್ಥಿತರಿದ್ದರು.
ಕಟೀಲು ಶ್ರೀ ದುರ್ಗಾ ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಕಾಲೇಜು ಪ್ರಿನ್ಸಿಪಾಲ್, ಡಾ. ಪದ್ಮನಾಭ ಮರಾಠೆ ಸ್ವಾಗತಿಸಿದರು. ಶಿರಸಿ ಸಂಸ್ಕ್ರತ ಶೋಧ ಸಂಸ್ಥಾನ ಅಧ್ಯಕ್ಷ ಡಾ. ಜಿ. ಎನ್ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಾದ್ಯಾಪಕ ಡಾ. ನಾಗರಾಜ್ ಬಿ ವಂದಿಸಿದರು, ಪ್ರಾದ್ಯಾಪಕ ಡಾ. ಸೋಂದ ಬಾಸ್ಕರ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-30011609

Comments

comments

Comments are closed.

Read previous post:
Kinnigoli-30011605
ಕಿನ್ನಿಗೋಳಿ: ಪಾದಾನಾಮ ಆರಾಧನೋತ್ಸವ

ಕಿನ್ನಿಗೋಳಿ: ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿ ಅವರ ಪಾದಾನಾಮ ಆರಾಧನೋತ್ಸವ ಕಿನ್ನಿಗೋಳಿಯ ಶ್ರೀ ರಾಮ ಮಂದಿರದಲ್ಲಿ ನಡೆಯಿತು.

Close