ದೈವಸ್ಥಾನ-ದೇವಸ್ಥಾನ ತುಳುನಾಡ ಸಂಸ್ಕೃತಿಯ ಪ್ರತೀಕ

ಕಿನ್ನಿಗೋಳಿ: ದೈವಸ್ಥಾನ, ದೇವಸ್ಥಾನಗಳು ತುಳುನಾಡ ಸಂಸ್ಕೃತಿಯ ಪ್ರತೀಕವಾಗಿವೆ. ತುಳು ನಾಡಿನ ಆಚಾರ, ವಿಚಾರ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಬೇಕು. ಎಂದು ಯುವಜನ ಸೇವೆ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಅತ್ತೂರು ಕಾಪಿಕಾಡು ಶ್ರೀ ಕೋರ‍್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದ ಸಾಧಕ ರಾಘವೇಂದ್ರ ರಾವ್ ಬಿ., ಅವರನ್ನು ಸನ್ಮಾನಿಸಲಾಯಿತು.
ವೇ.ಮೂರ್ತಿ ಪಂಜ ವಾಸುದೇವ ಭಟ್ ಆಶೀರ್ವಚನನೀಡಿದರು.
ಮಾಜೀ ಮಂಡಲ ಪ್ರಧಾನ ಬಾಲಾದಿತ್ಯ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹಳೆಯಂಗಡಿ ಪಿ.ಸಿ.ಎ. ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಅತ್ತೂರು ಕಾಪಿಕಾಡು ಶ್ರೀ ಕೊರ‍್ದಬ್ಬು ದೈವಸ್ಥಾನದ ಆಡಳಿತ ಮುಖ್ಯಸ್ಥ ಶ್ರೀನ ಸ್ವಾಮಿ ಕಾಪಿಕಾಡು, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಬೊಳ್ಳೂರು, ಲೀಲಾ ಪೂಜಾರ‍್ತಿ, ಸೇಸಪ್ಪ ಸಾಲ್ಯಾನ್, ಮಯ್ಯದ್ದಿ ಪಕ್ಷಿಕೆರೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ, ಧನಂಜಯ ಶೆಟ್ಟಿಗಾರ್, ದಿನೇಶ್ ಹರಿಪಾದೆ, ಕೆಮ್ರಾಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಎಸ್ ಮತ್ತಿತರರು ಉಪಸ್ಥಿತರಿದ್ದರು.
ಜಗದೀಶ್ ಸ್ವಾಗತಿಸಿ, ಸಂದೀಪ್ ಕಾಪಿಕಾಡ್ ಮತ್ತು ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Kinnigoli-30011603 Kinnigoli-30011604

Comments

comments

Comments are closed.

Read previous post:
Kinnigoli-30011602
ಉಳೆಪಾಡಿ: ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಾಲಯದಲ್ಲಿ ಮೇ. 22 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗಲಿದೆ. ದೇವಳದ ಜಾತ್ರಾ ಸಂದರ್ಭದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮದರ್ಶಿ...

Close