ಗಿಡಿಗೆರೆ – ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

ಕಿನ್ನಿಗೋಳಿ: ಶ್ರೀ ಚೇತನಾ ಯುವಜನ ಸೇವಾ ಸಮಿತಿ (ರಿ) ಕೊಂಡೆಮೂಲ, ಗಿಡಿಗೆರೆ, ಕಟೀಲು ಇವರ ಸಂಯೋಗದಲ್ಲಿ ೨೧ ನೇ ವರ್ಷದ ಗಿಡಿಗೆರೆ ವಠಾರದಲ್ಲಿ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಕಲಿಕೆಯಲ್ಲಿ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಾದ ಕೃತಿಕಾ, ಅನನ್ಯ, ಕಾವ್ಯ, ಮಾನಸ, ಶ್ರೀವಲ್ಲಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಗುರುರಾಜ ಎಸ್. ಪೂಜಾರಿ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಗೀತಾ ಪುಜಾರ‍್ತಿ, ಪ್ರೌಢಶಾಲಾ ಉಪಪ್ರಾಚಾರ‍್ಯ ಸೋಮಪ್ಪ ಅಲಂಗಾರು, ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ, ಗ್ರಾ. ಪಂ. ಸದಸ್ಯ ರಮಾನಂದ ಪೂಜಾರಿ, ಉದ್ಯಮಿ ಲಕ್ಷ್ಮಣ , ಮಾಜಿ ತಾ. ಪಂ. ಸದಸ್ಯ ತಿಮ್ಮಪ್ಪ ಕೋಟ್ಯಾನ್, ರಾಜು ಕೊಂಡೇಲ , ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-300116010

Comments

comments

Comments are closed.

Read previous post:
Kinnigoli-30011609
ಕಟೀಲು : ರಾಷ್ಟ ಮಟ್ಟದ ವಿಚಾರ ಗೋಷ್ಟಿ

ಕಿನ್ನಿಗೋಳಿ: ಯುವ ಚೇತನಗಳು ಸಂಸ್ಕ್ರತ ಭಾಷೆಯನ್ನು ಸಂಪ್ರದಾಯಬದ್ದವಾಗಿ ಕಲಿತು ಮುಂದಿನ ಪೀಳಿಗೆಗಳಿಗೆ ಪ್ರೇರಕರಾಗುವಂತೆ ಮುಂದುವರಿಸಿಕೊಂಡು ಹೋಗಬೇಕು ಎಂದು ಕಟೀಲು ದೇವಳದ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು ಕಟೀಲು...

Close