ಸೌರವಿದ್ಯುತ್ ಪಾರ್ಕ್: ಸಚಿವ ಡಿಕೆ ಶಿವಕುಮಾರ್

ಕಿನ್ನಿಗೋಳಿ: ರಾಜ್ಯದ ಪಾವಗಡದಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಪಾರ್ಕ್ ನಿರ್ಮಿಸಲಾಗುವುದು ಈ ಯೋಜನೆಯಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಇಂದನ ಸಚಿವ ಡಿ. ಕೆ. ಶಿವಕುಮಾರ್ ಹೇಳಿದರು.
ಶನಿವಾರ ಕರ್ನಿರೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ ವಿದ್ಯುತ್ ಕೊರತೆಯಾಗದಂತೆ ಬೇರೆ ರಾಜ್ಯದಿಂದ ವಿದ್ಯುತ್ ಖರೀದಿ ಮಾಡಲಾಗುವುದು. ಬರಗಾಲ ಇದ್ದರೂ ವಿದ್ಯುತ್ ಕೊರತೆ ಇಲ್ಲ ಶಾಲಾ ಮಕ್ಕಳ ಪರೀಕ್ಷೆ ಸಮಯದಲ್ಲೂ ವಿದ್ಯುತ್ ಕಡಿತ ಮಾಡುವ ಪ್ರಮೇಯ ಬರುದಿಲ್ಲ ಎಂದು ಹೇಳಿದರು.
ಸುರತ್ಕಲ್ ಶಾಸಕ ಮೊಯ್ದಿನ್ ಬಾವ, ಉದ್ಯಮಿ ಕೆ. ಎಸ್ ಸಯ್ಯದ್, ರಾಜ್ಯ ಚುನಾವಣೆ ವೀಕ್ಷಕ ಪಿ. ಸುದರ್ಶನ್, ಜಿಲ್ಲಾ ಯುವ ಕಾಂಗ್ರೇಸ್ ಮಿಥುನ್ ರೈ, ಉದ್ಯಮಿ ಬಿ. ಎಂ. ಫಾರೂಕ್, ಹಕೀಮ್‌ಪಾಲ್ಕನ್, ಪರ್ವೆಜೆ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-300116011

Comments

comments

Comments are closed.

Read previous post:
Kinnigoli-300116010
ಗಿಡಿಗೆರೆ – ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

ಕಿನ್ನಿಗೋಳಿ: ಶ್ರೀ ಚೇತನಾ ಯುವಜನ ಸೇವಾ ಸಮಿತಿ (ರಿ) ಕೊಂಡೆಮೂಲ, ಗಿಡಿಗೆರೆ, ಕಟೀಲು ಇವರ ಸಂಯೋಗದಲ್ಲಿ ೨೧ ನೇ ವರ್ಷದ ಗಿಡಿಗೆರೆ ವಠಾರದಲ್ಲಿ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ...

Close