ರೋವರ್ಸ್-ರೇಂಜರ್ಸ್ ಘಟಕ ಜಲ ಸಾಹಸ ಶಿಬಿರ

ಮೂಲ್ಕಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಎಳವೆಯಲ್ಲಿ ಜೀವನ ಪದ್ದತಿಯನ್ನು ಕಳುಹಿಸುವುದರ ಜೊತೆಗೆ ಜಲ ಸಾಹಸ ಕ್ರೀಡೆ ಮೂಲಕ ಮಕ್ಕಳಲ್ಲಿ ಸ್ಥೆರ್ಯ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆಯೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದ.ಕ.ಜಿಲ್ಲಾ ಸಂಸ್ಥೆ, ಸ್ಥಳೀಯ ಮೂಲ್ಕಿ ಸಂಸ್ಥೆ ಹಾಗೂ ಮೂಲ್ಕಿ ಮಂತ್ರ ಸರ್ಫ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿ ಕೊಳಚಿಕಂಬಳದ ಮಂತ್ರ ಸರ್ಫ್ ಕ್ಲಬ್ ನಲ್ಲಿ 5 ದಿನಗಳ ಕಾಲ ಜರಗಲಿರುವ ರಾಷ್ಟ್ರ ಮಟ್ಟದ  ರೋವರ್ಸ್ ಮತ್ತು ರೇಂಜರ್ಸ್ ಘಟಕದ ಜಲ ಸಾಹಸ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಧರ್ಮಗಳು ಒಂದೇ ಆಗಿದ್ದು ಸ್ಕೌಟ್ಸ್ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಜೀವನದಲ್ಲಿ ಸತ್ಯವನ್ನು ಅಳವಡಿಸಿಕೊಂಡು ಪ್ರಕೃತಿಯನ್ನು ಪ್ರೀತಿಸುವುದರ ಜೊತೆಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು, ಸ್ವಚ್ಚ ಭಾರತವನ್ನು ಮಾಡುವ ಮೊದಲು ಮನಸ್ಸನ್ನು ಸ್ವಚ್ಚಗೊಳಿಸುವ ಕಾರ್ಯವಾಗಬೇಕೆಂದು ಅವರು ಹೇಳಿದರು.
ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ ಶರಣಪ್ಪ, ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರೀಯ ಮಹಾ ಪ್ರಬಂಧಕ ಕೆ ಟಿ ರೈ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದರು.
ಮೂಲ್ಕಿ ಕಾರ್ನಾಡು ಹರಿಹರ ಕ್ಷೇತ್ರ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎನ್ ಜಿ ಮೋಹನ್, ಗೈಡ್ಸ್ ಜಿಲ್ಲಾ ಆಯುಕ್ತೆ ಐರಿನ್ ಡಿ ಕುನ್ಹ, ಉದ್ಯಮಿ ಧನಂಜಯ ಶೆಟ್ಟಿ, ವಿ ಕೆ ಶೆಟ್ಟಿ, ಜೊಯ್ ಅಲ್ಬುಕರ್ಕ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥಾ ಜಿಲ್ಲಾ ಸಹಾಯಕ ಆಯುಕ್ತ ಎಂ ಸರ್ವೋತ್ತಮ ಅಂಚನ್ ಸ್ವಾಗತಿಸಿದರು. ಪ್ರತಿಮಾ ಕುಮಾರ್ ವಂದಿಸಿದರು,ರಾಜ್ಯಪ್ರಾಂತೀಯ ಸಂಘಟನಾ ಆಯುಕ್ತ ಅಲನೇಂದ್ರ ಶರ್ಮ ಪ್ರಸ್ತಾವನೆಗೈದರು, ಸಂಘಟನಾ ಆಯುಕ್ತ ಎಂ ಜೆ ಕಜೆ ನಿರೂಪಿಸಿದರು.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್ ಸೇರಿದಂತೆ ದೇಶಾದ್ಯಂತ ಪ್ರತಿ ರಾಜ್ಯಗಳಿಂದ ತಲಾ 5 ರಂತೆ ಮೂವತ್ತು ರಾಜ್ಯಗಳ ಸುಮಾರು 150 ಪ್ರತಿನಿಧಿಗಳು ಹಾಗೂ ಉಭಯ ಜಿಲ್ಲೆಯ ತಲಾ 50 ಪ್ರತಿನಿಧಿಗಳು ಭಾಗವಹಿಸಿದ್ದರು.

Mulki-30011601

Comments

comments

Comments are closed.

Read previous post:
Kinnigoli-28011604
ಹಳೆವಿದ್ಯಾರ್ಥಿ ಸಂಘ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ: ತೋಕೂರು ತಪೋವನ ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ಡಾ. ಎಂ ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಶಾಲೆ ಹಳೆವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ...

Close