ಯಂಗ್ ಫ್ರೆಂಡ್ಸ್ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಗುತ್ತಕಾಡು -ಶಾಂತಿನಗರ ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಯಂಗ್ ಫ್ರೆಂಡ್ಸ್ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟ ಹಾಗೂ 6ನೇ ವರ್ಷದ ವಾರ್ಷಿಕೋತ್ಸವ ಭಾನುವಾರ ಗುತ್ತಕಾಡು ಶಾಲಾ ಮೈದಾನದಲ್ಲಿ ನಡೆಯಿತು.
ಸಾಧಕರಾದ ಅಬೂಬಕ್ಕರ್ ಸಾದಿಕ್, ಹಿರಿಯ ಕ್ರಿಕೆಟ್ ಆಟಗಾರ ಅರ್ಥರ್ ಡಿಸೋಜ , ರಾಜ್ಯಮಟ್ಟದ ವೀಕ್ಷಕ ವಿವರಣೆಗಾರ ಶ್ರೀಶ ಶರಾಫ್ ಐಕಳ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಟಿ. ಎಚ್ ಮಯ್ಯದ್ದಿ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿPರ, ಮೂಕಾಂಬಿಕಾ ದೇವಳದ ವಿವೇಕಾನಂದ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಎ.ಪಿ. ಎಂ. ಸಿ ಸದಸ್ಯ ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ಶ್ಯಾಮಲ ಹೆಗ್ಡೆ , ದೇವಪ್ರಸಾದ್ ಪುನರೂರು, ಬಾಲಕೃಷ್ಣ ಡಿ. ಸಾಲ್ಯಾನ್, ಚಂದ್ರಶೇಖರ್, ಅಬ್ದುಲ್ ರಜಾಕ್, ಹನೀಫ್ ಟಿ. ಎ, ಉದ್ಯಮಿ ಅಖ್ತರ್ , ಮಹಮ್ಮದ್ ಅಲಿ, ಶಶಿಕಾಂತ್‌ರಾವ್ ಎಳತ್ತೂರು, ಮುಬೀನ್ ಗುತ್ತಕಾಡು, ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ತಾಹೀರ್ ನಕಾಶ್ , ದಿವಾಕರ ಕರ್ಕೆರಾ ಮತ್ತಿತರರು ಉಪಸ್ಥಿತರಿದ್ದರು.
ಕ್ರಿಕೆಟ್ ಪಂದ್ಯಾಟದಲ್ಲಿ ಎಸ್. ಎಸ್. ಸಿ. ಸಿ ಪ್ರಥಮ, ಸೆವನ್ ಸ್ಟಾರ್ ಕಾರ್ನಾಡ್ ದ್ವಿ ತೀಯ ಪ್ರಶಸ್ತಿ ಪಡೆದುಕೊಂಡಿತು.

Kinnigoli-01021602

Comments

comments

Comments are closed.

Read previous post:
Kinnigoli-01021601
ಪುನರೂರು ಪ್ರೌಢ ಶಾಲಾ ಶೌಚಾಲಯ ಉದ್ಘಾಟನೆ

ಕಿನ್ನಿಗೋಳಿ:  ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ ಪುನರೂರು ಭಾರತಮಾತ ಪ್ರೌಢ ಶಾಲೆಗೆ ನಿರ್ಮಿಸಿದ ಶೌಚಾಲಯನ್ನು ಭಾನುವಾರ ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಈ ಸಂದರ್ಭ ಯುಗಪುರುಷದ ಸಂಪಾದಕ ಭುವನಾಭಿರಾಮ...

Close