ಪೌರಾಣಿಕ ಕಥಾ ಸತ್ಸಂಗ

ಕಿನ್ನಿಗೋಳಿ: ಗುರುಹಿರಿಯರ ಬಗ್ಗೆ ಭಕ್ತಿಭಾವನೆ ಮಕ್ಕಳಲ್ಲಿ ಇರಬೇಕು, ಕಠಿಣ ದುಡಿಮೆ, ಪ್ರಾಮಾಣಿಕತೆ ಮಾತಾಪಿತರ ಸೇವೆ ಹಾಗೂ ದೇಶಸೇವೆ ಮುಂತಾದ ಉದಾತ್ತ ಗುಣಗಳಿಂದ ಸಮಾಜಕ್ಕೂ, ತಂದೆ-ತಾಯಿಗಳಿಗೂ ಕೀರ್ತಿ ತರಲು ಸಾಧ್ಯವಿದೆ ಎಂದು ಹರಿದಾಸ್ ಸುಧಾಕರ ಕೋಟೆಕುಂಜತ್ತಾಯ ಹೇಳಿದರು.
ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮದಲ್ಲಿ ಭಕ್ತ ಮಾರ್ಕಾಂಡೇಯ ಪೌರಾಣಿಕ ಕಥಾ ಸತ್ಸಂಗ ಉಪನ್ಯಾಸ ನೀಡಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣ ಹೆಗಡೆ, ಕಟೀಲು ಸ್ಪೋಟ್ಸ್ ಮತ್ತು ಗೇಮ್ಸ್ ಕ್ಲಬ್ ಕೇಶವ, ಶಾಲಾ ಮುಖ್ಯ ಶಿಕ್ಷಕ ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-02021601

Comments

comments

Comments are closed.

Read previous post:
ಯಂಗ್ ಫ್ರೆಂಡ್ಸ್ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಗುತ್ತಕಾಡು -ಶಾಂತಿನಗರ ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಯಂಗ್ ಫ್ರೆಂಡ್ಸ್ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟ ಹಾಗೂ 6ನೇ ವರ್ಷದ ವಾರ್ಷಿಕೋತ್ಸವ ಭಾನುವಾರ ಗುತ್ತಕಾಡು ಶಾಲಾ ಮೈದಾನದಲ್ಲಿ...

Close