ಕಟೀಲು: ಯುವತಿಯ ಅತ್ಯಾಚಾರ

Kateel--06021604

ಕಟೀಲು: 19ರ ಹರೆಯದ ಯುವತಿಯೊಬ್ಬಳನ್ನು 56 ಹೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕಟೀಲಿನಲ್ಲಿ ನಡೆದಿದೆ.
ಕಟೀಲು ದೇವಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹರೀಶ್ಚಂದ್ರ ರಾವ್ ಯಾನೆ ಅಪ್ಪು ಭಟ್ ಎಂದು ಆರೋಪಿಸಲಾಗಿದೆ. ಯುವತಿಯ ದೂರು ಸ್ವೀಕರಿಸಿರುವ ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಕೆಲಸಕ್ಕೆಂದು ಬರುತ್ತಿದ್ದ ಯುವತಿಯನ್ನು ಹೆದರಿಸಿ ಅತ್ಯಾಚಾರ ಎಸಗಿದ್ದು, ಮನನೊಂದ ಯುವತಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಳು ತದನಂತರ ಬಲವಂತವಾಗಿ ಮತ್ತೆ ಕೆಲಸಕ್ಕೆ ಬರುವಂತೆ ಮಾಡಿದ್ದ. ಅತ್ಯಾಚಾರ ಎಸಗಿದ ಪರಿಣಾಮ ಯುವತಿ 6 ತಿಂಗಳ ಗರ್ಭಿಣಿಯಾಗಿದ್ದು, ಕಳೆದ ಕೆಲದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗರ್ಭ ತೆಗೆಸಲು ತೆರಳಿದ್ದ ಸಂದರ್ಭ ವೈದ್ಯರು ನಿರಾಕರಿಸಿದ್ದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಸ್ಥಳೀಯರಿಗೆ ತಿಳಿಯುತ್ತಿದ್ದಂತೆಯೇ ಯುವತಿ ಹಾಗೂ ಕುಟುಂಬವನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ರವಾನಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಸ್ಥಳೀಯರು ಹುಡುಕಾಟ ನಡೆಸಿ ಯುವತಿಯ ಮನೆಯವರಲ್ಲಿ ದೈರ್ಯ ತುಂಬಿದ ಪರಿಣಾಮ ಯುವತಿ ದೂರು ನೀಡಲು ಮುಂದಾದಳು ಎಂದು ತಿಳಿದು ಬಂದಿದೆ. 4 ತಿಂಗಳ ಹಿಂದೆ ಹರೀಶ್ಚಂದ್ರ ರಾವ್ ಅವರ ಪತ್ನಿ ನಾಗಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರು ದಾಖಲಾಗಿತ್ತು.

Comments

comments

Comments are closed.

Read previous post:
Mulki-06021603
ಶ್ರೀ ದೇವರಿಗೆ ನೂತನ ರಜತ ರಥ ಸಮರ್ಪಣೆ

ಮೂಲ್ಕಿ: ಮೂಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನಲ್ಲಿ ಫೆ. 10ರಂದು ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಶ್ರೀ ದೇವರಿಗೆ ನೂತನ ರಜತ ರಥ ಸಮರ್ಪಣೆಗೊಳ್ಳಲಿರುವ ಕೋಟೇಶ್ವರದ ರಾಷ್ಟ್ರೀಯ ಶಿಲ್ಪ...

Close