ಬೈ ಹುಲ್ಲು,ಹಗ್ಗದಿಂದ ಹಕ್ಕಿಗಳ ಗೂಡು

ಮೂಲ್ಕಿ:  ಪ್ರತಿಯೋರ್ವರಲ್ಲು ಉತ್ತಮ ಪ್ರತಿಭೆಗಳಿದ್ದು ಅದನ್ನು ಸದುಪಯೋಗಪಡಿಸಿಕೊಂಡಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ.
ಮೂಲ್ಕಿಯ ಬಪ್ಪನಾಡುವಿನ ಬಡಗಹಿತ್ಲುವಿನ ನಿವಾಸಿ ಶೇಖರ ದೇವಾಡಿಗ ಆರ್ಥಿಕವಾಗಿ ಹಿಂದುಳಿದಿದ್ದು ಮೂಲ್ಕಿಯ ಬಪ್ಪನಾಡು ದೇವಳದಲ್ಲಿ ತಾತ್ಕಲಿಕ ನೆಲೆಯಲ್ಲಿ ಸ್ವಚ್ಚತೆಯನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.ತನ್ನ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು ದೇವಳದಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.ದೇವಳದಲ್ಲಿ ಸಿಗುವ ಸಂಬಳದಲ್ಲಿ ತನ್ನ ಜೀವನವನ್ನು ನಿರ್ವಹಿಸಲು ಅಸಾಧ್ಯವಾಗಿದ್ದು ಇದರಿಂದ ದೇವಳದ ಕೆಲಸದ ಜೊತೆಗೆ ತನಗೆ ತಿಳಿದಿರುವ ಬೈ ಹುಲ್ಲಿನಿಂದ ಭತ್ತದ ಚಿಕ್ಕ ಕಣಜ,ಭತ್ತದ ಮುಡಿ ಹಾಗೂ ಹುರಿ ಹಗ್ಗದಿಂದ ಹಕ್ಕಿಗಳ ಗೂಡುಗಳನ್ನು ಮನೆಯಲ್ಲಿ ನಿರ್ಮಿಸುತ್ತಿದ್ದಾರೆ.ತುಂಬಾ ಶ್ರದ್ದೆಯಿಂದ ಕಾಯಕವನ್ನು ಮಾಡುತ್ತಿರುವ ಶೇಖರ ದೇವಾಡಿಗರು ಈಗಾಗಲೇ ಹಲವಾರು ಗುಬ್ಬಚ್ಚಿ ಸೇರಿದಂತೆ ವಿವಿಧ ಹಕ್ಕಿಗಳ ಗೂಡುಗಳನ್ನು ನಿರ್ಮಿಸಿದ್ದು ಇವರ ಆಸಕ್ತಿಯನ್ನು ಗಮನಿಸಿ ಕೆಲವರು ಇವರಿಂದ ಹಕ್ಕಿ ಗೂಡುಗಳನ್ನು ಮುಂಬೈ ಮತ್ತಿತರ ಪ್ರದೇಶಗಳಿಗೆ ಕೊಂಡೊಯ್ದಿದ್ದಾರೆ.ಮಕ್ಕಳಿಗೆ ಶಾಲೆಗಳಲ್ಲಿ ವಸ್ತು ಪ್ರದರ್ಶನದ ಸಂದರ್ಭದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ಬೈ ಹುಲ್ಲು ಮತ್ತು ಹುರಿ ಹಗ್ಗದಿಂದ ವಿವಿಧ ಕಲಾಕೃತಿಗಳನ್ನು ನಿರ್ಮಿಸಿ ಕೊಟ್ಟಿದ್ದು ಹಲವಾರು ವಿದ್ಯಾರ್ಥಿಗಳು ಉವರ ಕಲಾಕೃತಿಯಿಂದಾಗಿ ಬಹುಮಾನವನ್ನು ಪಡೆದಿದ್ದಾರೆ.
ತುಂಬಾ ಸಾಧು ಸ್ವಭಾವದ ಶೇಖರ್ ರವರು ದಿನ್ ಹೆಚ್ಚು ಹೊತ್ತು ಬಪ್ಪನಾಡು ದೇವಳದಲ್ಲಿ ಕೆಲಸ ಮಾಡುತ್ತಿದ್ದು ರಾತ್ರಿಯ ಅವಧಿಯಲ್ಲಿ ಮನೆಯಲ್ಲಿ ಹಕ್ಕಿಗಳ ಗೂಡುಗಳನ್ನು ನಿರ್ಮಿಸುತ್ತಾರೆ.ಮನೆಯಲ್ಲಿ ಪತ್ನಿ ಮಕ್ಕಳಿದ್ದು ಜೀವನ ನಿರ್ವಹಣೆ ಅಸಾಧ್ಯವಾಗಿರುವುದರಿಂದ ಹೆಚ್ಚು ಹೊತ್ತು ವಿವಿಧ ಕಲಾಕೃತಿಗಳ ರಚನೆಯಲ್ಲಿ ತೊಡಗಿಸುತ್ತಾರೆ.ಇವರು ನಿರ್ಮಿಸಿದ ಗೂಡು ಮತ್ತಿತರ ಪರಿಕರಗಳಿಗೆ ಇವರು ಹಣವನ್ನು ನಿಗದಿ ಪಡಿಸುವುದಿಲ್ಲ.ಖರೀದಿಸಿದವರು ನೀಡಿದ ಮೊತ್ತವನ್ನು ಸ್ವೀಕರಿಸುತ್ತಾರೆ.ಮೂಲ್ಕಿಯ ಬಪ್ಪನಾಡು ದೇವಳದ ಕಚೇರಿಯ ಎದುರುಗಡೆ ಇವರು ನಿರ್ಮಿಸಿದ ಗುಬ್ಬಚ್ಚಿ ಗೂಡಿನಲ್ಲಿ ಗುಬ್ಬಚ್ಚಿಗಳು ಕಳೆದ ಹಲವಾರು ವರ್ಷಗಳಿಂದ ವಾಸಿಸುತ್ತಿದೆ.ಪರಿಸರ ಪ್ರೇಮಿಯಾಗಿದ್ದು ದೇವಳದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ.ಈಗ ಮೆಷಿನ್ ಮೂಲಕ ಭತ್ತದ ಪೈರಿನ ಕೆಲಸ ನಡೆಯುತ್ತಿರುವುದರಿಂದ ಬೈ ಹುಲ್ಲಿನ ಸಮಸ್ಯೆಯಾಗಿದ್ದು ಆದರೂ ಸಿಕ್ಕಿದ ಬೈಹುಲ್ಲಿನಿಂದ ತಮ್ಮ ಕಾಯಕವನ್ನು ಮುಂದುವರಿಸುತ್ತಿದ್ದಾರೆ.ತೆಂಗಿನ ಸಿಪ್ಪೆಯ ನಾರಿನಿಂದ ಹಗ್ಗದ ರೀತಿ ನಿರ್ಮಿಸಿ ಗುಬ್ಬಚ್ಚಿ ಗೂಡನ್ನು ಮಾಡುತ್ತಿದ್ದು ಇವರಿಗೆ ಯಾವುಧೆ ರೀತಿಯ ಆರ್ಥಿಕ ಪ್ರೋತ್ಸಾಹ ಸಿಗದಿರುವುದರಿಂದ ಬೇಸತ್ತಿದ್ದಾರೆ.ಇಂತವರಿಗೆ ಪ್ರೋತ್ಸಾಹ ನೀಡಿದಲ್ಲಿ ಇನ್ನಷ್ಷು ಉತ್ತಮ ಕಲಾಕೃತಿಗಳು ಮೂಡಲು ಸಾಧ್ಯ

Mulki-06021602

Comments

comments

Comments are closed.

Read previous post:
Mulki-06021601
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ-ಭೇಟಿ

ಮೂಲ್ಕಿ: ದೇವರ ಮೇಲಿನ ಅನನ್ಯ ಭಕ್ತಿ ಸನ್ಮಾರ್ಗ ಸಾಧನೆಯ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶ್ರೀ ಕಾಣಿಯೂರು ಮಠಾದೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ಹೇಳಿದರು....

Close