ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ-ಭೇಟಿ

ಮೂಲ್ಕಿ: ದೇವರ ಮೇಲಿನ ಅನನ್ಯ ಭಕ್ತಿ ಸನ್ಮಾರ್ಗ ಸಾಧನೆಯ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶ್ರೀ ಕಾಣಿಯೂರು ಮಠಾದೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ಹೇಳಿದರು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಕಾಲಭೈರವ ದೇವದರ್ಶನ ನಿರ್ಭಯ ಪ್ರಸಾದ ಸ್ವೀಕರಿಸಿ ಬಳಿಕ ಆಶೀರ್ವಚನ ನೀಡಿದರು.
ಜೀವನದ ಅಭಿವೃದ್ಧಿಗೆ ಮಾನಸಿಕ ಶಾಂತಿ ಬಹಳ ಮುಖ್ಯವಾಗಿದ್ದು ದೇವರ ಆರಾಧನೆ ಹಾಗೂ ತೀರ್ಥ ಕ್ಷೇತ್ರಗಳ ಭೇಟಿಯಿಂದ ಶಾಂತಿ ಗಳಿಕೆ ಸಾದ್ಯವಾಗುತ್ತದೆ. ಎಂದರು.
ಈ ಸಂದರ್ಭ ಕ್ಷೇತ್ರದ ಅರ್ಚಕ ವರ್ಗ,ಮೊಕ್ತೇಸರರು ಹಾಗೂ ಆಡಳಿತ ಮಂಡಳಿಸದಸ್ಯರು ಹಾಗೂ ಭಜಕವೃಂದ ಉಪಸ್ಥಿತರಿದ್ದರು.

Mulki-06021601

Comments

comments

Comments are closed.