ಗುತ್ತಕಾಡಿನಲ್ಲಿ ಕಾಡುಕೋಣ

ಕಿನ್ನಿಗೋಳಿ :ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಸರಕಾರಿ ಶಾಲಾ ಮೈದಾನದ ಬಳಿಯ ಗುಡ್ದದಲ್ಲಿ ಒಂದು ಜೋಡಿ ಕಾಡು ಕೋಣಗಳು ಭಾನುವಾರ ಅಲೆದಾಡುತ್ತಿದ್ದು ಬಳಿಕ ಗುತ್ತಕಾಡು ಗೋಪಾಲ ಭಂಡಾರಿಯವರ ತೋಟದಲ್ಲಿ ಕಾಡು ಕೋಣಗಳು ಕಾಣಿಸಿಕೊಂಡು ಜನರನ್ನು ಭಯ ಭೀತಿಗೊಳಿಸಿದೆ.
ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯಧಿಕಾರಿ ಪರಮೇಶ್ವರ್, ಪ್ರಕಾಶ್ ಹಾಗೂ ತಂಡ ಸ್ಥಳಕ್ಕೆ ಆಗಮಿಸಿ ಬಲೆಕಟ್ಟಿ ಹಿಡಿಯುವ ಪ್ರಯತ್ನ ಮಾಡಿದ್ದರು ಆದರೆ ಕೋಣಗಳು ಬಲೆಗೆ ಸಿಗದೆ ಸಮೀಪದ ಕಾಡಿಗೆ ಓಡಿ ಹೋದವು.
ನಾಲ್ಕು ದಿನಗಳ ಹಿಂದೆ ಮುಂಡ್ಕೂರಿನಲ್ಲಿ ಕಾಣಸಿಕ್ಕಿದ ಕಾಡುಕೋಣಗಳು ಶುಕ್ರವಾರ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕಲಕರಿಯ ಮಿಶನ್ ಕಂಪೌಂಡ್ ಬಳಿ ತಿರುಗಾಡುತ್ತಿತ್ತು. ಶನಿವಾರ ಉಳೆಪಾಡಿ ಮಾಂಜಲಗುತ್ತು ಕೋರ‍್ದಬ್ಬು ದೈವಸ್ಥಾನ ಬಳಿ ಹಾಗೂ ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಅವರ ತೋಟದಲ್ಲಿ ಕಂಡು ಬಂದಿತ್ತು. ಸಾರ್ವಜನಿಕರು ಕಾಡುಕೋಣಗಳನ್ನು ಕಾಡಿಗೆ ಅಟ್ಟುವುದರಲ್ಲಿ ಸಫಲರಾದರು.

Kinnigoli-07021501 Kinnigoli-07021502 Kinnigoli-07021503

Comments

comments

Comments are closed.

Read previous post:
Kateel--06021604
ಕಟೀಲು: ಯುವತಿಯ ಅತ್ಯಾಚಾರ

ಕಟೀಲು: 19ರ ಹರೆಯದ ಯುವತಿಯೊಬ್ಬಳನ್ನು 56 ಹೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕಟೀಲಿನಲ್ಲಿ ನಡೆದಿದೆ. ಕಟೀಲು ದೇವಳದಲ್ಲಿ ಕೆಲಸ...

Close