ಸಂಘಟನೆ ಮನೋಭಾವದಿಂದ ಸಮಾಜದ ಅಭಿವೃದ್ಧಿ ಸಾಧ್ಯ.

ಕಿನ್ನಿಗೋಳಿ : ಯುವ ಜನಾಂಗ ಮಾದಕ ದ್ರವ್ಯ, ದುಶ್ಚಟಗಳನ್ನು ದೂರೀಕರಿಸಿ ಸಂಘಟನೆ ಮನೋಭಾವ ಬೆಳೆಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಎಂದು ಮೂಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯ್ಕ್ ಹೇಳಿದರು.
ಕೊಲ್ಲೂರು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶನಿವಾರ ನಡೆದ ಕೊಲ್ಲೂರು ಹಳೆವಿದ್ಯಾರ್ಥಿ ಸಂಘದ ೩೨ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಕೊಲ್ಲೂರು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಧಾಸಿನಿ ಹಾಗೂ ಐಕಳ ಪೊಂಪೈ ಕಾಲೇಜು ಉಪನ್ಯಾಸಕಿ ಡಾ. ಫ್ರೀಡಾ ರೋಡ್ರಿಗಸ್, ಕೊಡುಗೈದಾನಿ ರಮೇಶ್ ಉಳೆಪಾಡಿ, ನಾಟಕ ರಚನೆಗಾರ ಉಮೇಶ್ ಕೊಲ್ಲೂರು ಅವರನ್ನು ಸನ್ಮಾನಿಸಲಾಯಿತು.
ಹಳೆವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಐತಪ್ಪ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸರಕಾರಿ ಕಾಲೇಜು ಪ್ರಾಧ್ಯಾಪಕ ಸೇಸಪ್ಪ ಅಮೀನ್, ದಾಮಸ್‌ಕಟ್ಟೆ ವಿಜಯಾಬ್ಯಾಂಕ್ ಶಾಖಾ ಪ್ರಭಂಧಕ ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮೈಕಲ್ ರೋಡ್ರಿಗಸ್ ಸ್ವಾಗತಿಸಿ ಬಿಪಿನ್ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಸದಾಶಿವ ನಾಯ್ಕ್ ವಂದಿಸಿದರು. ವಿನಯ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07021505

Comments

comments

Comments are closed.

Read previous post:
Kinnigoli-07021504
ಮಹಿಳೆ ಅಬಲೆಯಲ್ಲ ಸಬಲೆ

ಕಿನ್ನಿಗೋಳಿ : ಇಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಕ್ಷೇತ್ರಗಳಲ್ಲಿ ಅಬಲೆಯಲ್ಲ ಸಬಲೆ ಎಂದು ಸಾಧಿಸಿ ತೋರಿದ್ದಾರೆ. ಮಹಿಳೆ ಉತ್ತಮ ಶಿಕ್ಷಣ ಪಡೆದಲ್ಲಿ ಇಡೀ ಕುಟುಂಬ ಮತ್ತು ಸಮಾಜ ಪ್ರಗತಿ...

Close