ಮಹಿಳೆ ಅಬಲೆಯಲ್ಲ ಸಬಲೆ

ಕಿನ್ನಿಗೋಳಿ : ಇಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಕ್ಷೇತ್ರಗಳಲ್ಲಿ ಅಬಲೆಯಲ್ಲ ಸಬಲೆ ಎಂದು ಸಾಧಿಸಿ ತೋರಿದ್ದಾರೆ. ಮಹಿಳೆ ಉತ್ತಮ ಶಿಕ್ಷಣ ಪಡೆದಲ್ಲಿ ಇಡೀ ಕುಟುಂಬ ಮತ್ತು ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಹೇಳಿದರು.
ಶನಿವಾರ ನಡೆದ ಎಸ್. ಕೋಡಿ ಸಂಗಮ ಮಹಿಳಾ ಮಂಡಲ ಹಾಗೂ ಯುವತಿ ಮಂಡಲದ 13 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಇಬ್ಬರು ವಿಕಲಚೇತನ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಹಸ್ತ ನೀಡಲಾಯಿತು.
ಹಳೆಯಂಗಡಿ ಮಹಿಳಾ ಮಂಡಲ ಅಧ್ಯಕ್ಷೆ ಜ್ಯೋತಿ ರಾಮಚಂದ್ರ, ಪತ್ರಕರ್ತ ಶರತ್ ಶೆಟ್ಟಿ, ದೈಹಿಕ ಶಿಕ್ಷಕಿ ಮಮತಾ ಶರತ್ ಶೆಟ್ಟಿ, ಸಂಗಮ ಮಹಿಳಾ ಮಂಡಲ ಗೌರವಾಧ್ಯಕ್ಷೆ ಶಾಲೆಟ್ ಪಿಂಟೊ, ಅಧ್ಯಕ್ಷೆ ದಮಯಂತಿ, ಕಾರ್ಯದರ್ಶಿ ಶೋಭಾ ರಾವ್, ಕೋಶಾಧಿಕಾರಿ ಸಂಜೀವಿ ಜೆ. ಶೆಟ್ಟಿ , ಸಂಘಟಕಿ ನಂದಾ ಪಾಯಸ್ ಉಪಸ್ಥಿತಿದ್ದರು.
ಶಶಿಸುರೇಶ್ ಸ್ವಾಗತಿಸಿ ಶ್ವೇತಾ ಸುವರ್ಣ ವಂದಿಸಿದರು. ಆಶಾಲತಾ ಕೆ ಕಾರ್ಯಕ್ರಮ ನಿರೂಪಿಸಿದರು.

Kinnigoli-07021504

Comments

comments

Comments are closed.

Read previous post:
Kinnigoli-07021502
ಗುತ್ತಕಾಡಿನಲ್ಲಿ ಕಾಡುಕೋಣ

ಕಿನ್ನಿಗೋಳಿ :ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಸರಕಾರಿ ಶಾಲಾ ಮೈದಾನದ ಬಳಿಯ ಗುಡ್ದದಲ್ಲಿ ಒಂದು ಜೋಡಿ ಕಾಡು ಕೋಣಗಳು ಭಾನುವಾರ ಅಲೆದಾಡುತ್ತಿದ್ದು ಬಳಿಕ ಗುತ್ತಕಾಡು ಗೋಪಾಲ...

Close