ವಾರ್ಷಿಕ ಪೂಜೆ ಹಾಗೂ ಪ್ರಾರ್ಥನಾಕೂಟ

ಮೂಲ್ಕಿ: ಯಶಸ್ವಿ ಸಮಾಜ ನಿರ್ಮಾಣದಲ್ಲಿ ಮುಖ್ಯ ಪಾತ್ರವಹಿಸುವ ಮಹಿಳೆಯನ್ನು ಮಾತೆ ಮರಿಯಮ್ಮನವರ ರೂಪದಲ್ಲಿ ಗೌರವಿಸಲು ಪವಿತ್ರ ಬೈಬಲ್ ತಿಳಿಸುತ್ತದೆ ಎಂದು ಶಿರ್ವಾ ರೆಕ್ಟರ್ ಸಿಮಾವ್ ಫೆರ್ನಾಂಡೀಸ್ ಹೇಳಿದರು.
ಮೂಲ್ಕಿಯ ಇತಿಹಾಸ ಪ್ರಸಿದ್ದ ಘಜನಿ ಚರ್ಚಿನಲ್ಲಿ ನಡೆದ ವಾರ್ಷಿಕ ಪೂಜೆ ಹಾಗೂ ಪ್ರಾರ್ಥನಾಕೂಟದಲ್ಲಿ ಮುಖ್ಯ ಗುರುಗಳಾಗಿ ಆಶೀರ್ವಚನ ನೀಡಿದರು.
ಉತ್ತಮ ಸಂಸ್ಕಾರ ಪೂರ್ಣ ನಮ್ಮದೇಶದಲ್ಲಿ ಇಂದು ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅನಾಚಾರಗಳು ಜನರಲ್ಲಿ ಧಾರ್ಮಿಕ ನಂಬಿಕೆಯ ಕುಸಿತವನ್ನು ಎತ್ತಿತೋರಿಸುತ್ತಿದೆ. ನಮ್ಮ ಧಾರ್ಮೀಕ ಗ್ರ್ರಂಥ ಮಹಿಳೆ ಮತ್ತು ಮಕ್ಕಳ ಬಗ್ಗೆ ಗೌರವ ಹಾಗೂ ಸಮಾಜದಲ್ಲಿ ಪ್ರಮುಖ ಸ್ಥಾನ ನೀಡಿದೆ. ಜನರು ಪವಿತ್ರ ಗ್ರಂಥದ ಅದ್ಯಯನ ನಡೆಸಿ ಅದರ ತತ್ವ ಸಾರಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಂಕಣಬದ್ದರಾಗ ಬೇಕು ಎಂದರು.
ಮೂಲ್ಕಿ ಚರ್ಚು ಧರ್ಮ ಗುರುಗಳಾದ ಪಾ. ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ಪ್ರಸ್ತಾವಿಸಿದರು.
ನೂಲ್ಕಿ ಡಿವೈನ್ ಕಾಲ್ ಸೆಂಟರ್ ಡೈರೆಕ್ಟರ್ ಫಾ.ವಲೇರಿಯನ್ ಫೆರ್ನಾಂಡೀಸ್ ಎಸ್‌ವಿಡಿ,ಪಕ್ಷಿಕೆರೆ ಸಂತ ಜೂದರ ಚರ್ಚಿನ ಧರ್ಮಗುರುಗಳಾದ ಫಾ.ಆಂಡ್ರ್ಯು ಲಿಯೋ ಡಿಸೋಜ,ಕಳತ್ತೂರು ಚರ್ಚಿನ ಫಾ.ಪ್ರಾನ್ಸಿಸ್ ಕರ್ನೇಲಿಯೋ, ಗುರುಪುರದ ಫಾ.ಆಂಟನಿ ಉಪಸ್ಥಿತರಿದ್ದರು.ಚರ್ಚು ಸಂಗೀತ ಮಂಡಳಿ ಹಾಗೂ ಬೆಥನಿ ಧರ್ಮ ಭಗಿನಿಯರು ಪೂಜಾ ಸಂಗೀತ ನೆರವೇರಿಸಿದರು.

Mulki-09021604

Comments

comments

Comments are closed.

Read previous post:
Mulki-09021603
ಜೀವನಮೌಲ್ಯ ಶಿಕ್ಷಣ ಶಿಭಿರ

ಮೂಲ್ಕಿ: ಸ್ವಾವಲಂಭಿ ಚಿಂತನೆಯ ಜೊತೆಗೆ ಉತ್ತಮ ಗಣ ಮೌಲೈಗಳ ಬಗ್ಗೆ ತಿಳುವಳಿಗೆ ಜೀವನದ ಅಭಿವೃದ್ಧಿಗೆ ಸಹಕಾರಿ ಎಂದು ಮೂಲ್ಕಿ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಹಿರಿಯ ವಾಘ್ಮಿ...

Close