ಅಹೋ ರಾತ್ರಿ ಭಜನಾ ಮಂಗಲೋತ್ಸ

ಮೂಲ್ಕಿ: ಕೆ.ಎಸ್.ರಾವ್ ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ 32ನೇ ವಾರ್ಷಿಕೋತ್ಸವ ಪ್ರಯುಕ್ತ ಅಹೋ ರಾತ್ರಿ ಭಜನಾ ಮಂಗಲೋತ್ಸವವನ್ನು ಎಸ್ಕೋಡಿ ಬಿಲ್ಲವ ಸಮಾಜ ಸೇವಾ ಸಂಘದ ಅರ್ಚಕ ದಾಮೋದರ ಸುವರ್ಣ ಮತ್ತು ಪ್ರಮಿಳಾ ಡಿ ಸುವರ್ಣ ಶನಿವಾರ ಉದ್ಘಾಟಿಸಿದರು.
ಸಂಘದ ವಾರ್ಷಿಕೋತ್ಸವವು ಆದಿತ್ಯವಾರ ಬೆಳಿಗ್ಗೆ ನಡೆಯಲಿದ್ದು 9.30ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ಜರಗಲಿದೆ ಹಾಗೂ ಸಂಜೆ 6ರಿಂದ ಮಹಿಳಾ ಮಂಡಲ ಸದಸ್ಯರಿಂದ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ 7ರಿಂದ ನಡೆಯಲಿರುವ ಸಭಾಕಾರ್ಯಕ್ರಮ ದಲ್ಲಿ ಮಂಗಳೂರು ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷತೆ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಮೂಲ್ಕಿ ಕ್ಷೇತ್ರ ಎ.ಪಿ.ಎಂ.ಸಿ ಸದಸ್ಯ ಪ್ರಮೋದ್ ಕುಮಾರ್, ಹಳೆಯಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಉಪಸ್ಥಿತರಿವರು.

Mulki-09021601

Comments

comments

Comments are closed.

Read previous post:
Kinnigoli-10021607
ಕಿನ್ನಿಗೋಳಿ ದಾಮಸ್ಕಟ್ಟೆಯಲ್ಲಿ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಚರ್ಚ್ ಬಳಿಯ ಬಾಟ ಕುಮೇರಿಗೆ ಆಕಸ್ಮಾತಾಗಿ ಬೆಂಕಿ ತಗುಲಿ ಸುಮಾರು 8 ಎಕರೆ ಪ್ರದೇಶಕ್ಕೆ ಕರಕಲಾಗಿದೆ, ಇಂದು ಸಂಜೆ ಸುಮಾರು 4 ಗಂಟೆಗೆ...

Close