ಮೂಲ್ಕಿ ವಿಜಯಾ ಕಾಲೇಜು ಹಾಸ್ಟೇಲ್ ದಿನಾಚರಣೆ

ಮೂಲ್ಕಿ: ಸ್ವಾವಲಂಭಿ ಹಾಗೂ ಆಂತರಿಕ ದೃಡತ್ವ ನೀಡುವ ಹಾಸ್ಟೇಲ್ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡ ವಿದ್ಯಾರ್ಥಿಗಳು ಭವಿಷ್ಯ ಜೀವನದಲ್ಲಿ ಉನ್ನತಿಗಳಿಸುತ್ತಾರೆ ಎಂದು ಮೂಲ್ಕಿ ಭಾರತ್ ಬ್ಯಾಂಕ್ ಪ್ರಭಂದಕ ಲಕ್ಷ್ಮೀನಾರಾಯಣ ಸಿ.ಸಾಲ್ಯಾನ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಹಾಸ್ಟೇಲ್ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಪ್ರೌಢ ವಿದ್ಯಾರ್ಥಿಗಳ ವಿವೇಚನೆಯಲ್ಲಿ ಎಲ್ಲವೂ ಸುಂದರವಾಗಿ ಗೋಚರಿಸಉವ ಕಾರಣ ಬಹು ಬೇಗ ದುಶ್ಚಟಗಳ ಹಾಗೂ ಸಮಾಜ ವಿರೋಧಿ ಶಕ್ತಿಗಳ ದಾಸರಾಗುವುದು ಕಂಡುಬರುತ್ತಿದ್ದು ಇವುದುಗಳು ವಿದ್ಯಾರ್ಥಿಯ ಭವಿಷ್ಯವನ್ನು ಕೊನೆಗಾಣಿಸುತ್ತದೆ ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಾಗೂಈ ಕ್ರೀಡೆಗೆ ಸಂಭಂದಿತ ಕಾರ್ಯಗಳ ಬಗ್ಗೆ ಸಂಪೂರ್ಣ ಒಲವು ತೋರಿಸಿ ಉತ್ತಮ ಸಾಧಕರಾಗಿ ಹೊರಹೊಮ್ಮಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ವಹಿಸಿದ್ದರು.
ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ,ವಾರ್ಡನ್ ಗಳಾದ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ಪ್ರೊ.ವೆಂಕಟೇಶ ಭಟ್ ಉಪಸ್ಥಿತರಿದ್ದರು, ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು.ಅದಿತ್ಯ ನಿರೂಪಿಸಿದರು. ಪ್ರೊ.ವೆಂಕಟೇಶ ಭಟ್ ವಂದಿಸಿದರು.

Mulki-09021602

Comments

comments

Comments are closed.

Read previous post:
Mulki-09021601
ಅಹೋ ರಾತ್ರಿ ಭಜನಾ ಮಂಗಲೋತ್ಸ

ಮೂಲ್ಕಿ: ಕೆ.ಎಸ್.ರಾವ್ ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ 32ನೇ ವಾರ್ಷಿಕೋತ್ಸವ ಪ್ರಯುಕ್ತ ಅಹೋ ರಾತ್ರಿ ಭಜನಾ ಮಂಗಲೋತ್ಸವವನ್ನು ಎಸ್ಕೋಡಿ ಬಿಲ್ಲವ ಸಮಾಜ ಸೇವಾ...

Close