ನಿಷ್ಠೆ ಪ್ರಾಮಾಣಿಕತೆಯ ವೃತ್ತಿಪರ ಬದುಕು ಸಾರ್ಥಕ

ಕಿನ್ನಿಗೋಳಿ: ವೃತ್ತಿಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಪರಿಗಣಿಸಿದಾಗ ವೃತ್ತಿಪರರ ಬದುಕು ಸಾರ್ಥಕ ಸಮಾಜ ಕೂಡಾ ಗುರುತಿಸುತ್ತದೆ. ಎಂದು ರೋಟರಿ ಜಿಲ್ಲೆ 3180 ವಲಯ 3 ರ ಸಹಾಯಕ ಗವರ್ನರ್ ಸತ್ಯೇಂದ್ರ ಪೈ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಸೋಮವಾರ ರೋಟರಿ ರಜತಭವನದಲ್ಲಿ ಆಯೋಜಿಸಿದ ವೃತ್ತಿಪರ ಮಾಸಚರಣೆ ಹಾಗೂ ವೃತ್ತಿಪರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹೋಟೇಲ್ ಉದ್ಯಮಿ ಕಮಲ, ರಿಕ್ಷಾ ವೃತ್ತಿಯ ಜಗನ್ನಾಥ್ ಕೋಟ್ಯಾನ್, ಪ್ರಗತಿ ಪರ ಕೃಷಿಕ ಸಂಜೀವ ಅಂಚನ್ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಜಿಲ್ಲೆ 3180 ವಲಯ 3 ರ ವಲಯ ಸೇನಾನಿ ರಾಬರ್ಟ್ ಪ್ರಾಂಕ್ಲಿನ್ ರೇಗೊ, ಕಿನ್ನಿಗೋಳಿ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ವಿಲಿಯಂ ಸಿಕ್ವೇರಾ, ವೃತ್ತಿಪರ ಸೇವಾ ಯೋಜನಾಧಿಕಾರಿ ವೇದವ್ಯಾಸ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಹೆರಿಕ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10021609

Comments

comments

Comments are closed.

Read previous post:
Kinnigoli-10021608
ವಿಂಧ್ಯಾಚಲ-ಶ್ರೀ ದೇವರಹಾ ಹಂಸಬಾಬಾ

ಕಿನ್ನಿಗೋಳಿ: ಭಕ್ತಿ, ಧ್ಯಾನ, ಯೋಗ ಚಿಂತನೆಯ ಮೂಲಕ ಗುರು ಹಾಗೂ ಕೃಷ್ಣನಲ್ಲಿ ಶರಣಾಗತಿ ಪಡೆದಾಗ ನಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗಿ ಮಾನಸಿಕ ಸಂತುಲತೆ ಹೆಚ್ಚಾಗುವುದು. ಎಂದು ವಿಂಧ್ಯಾಚಲದ ಶ್ರೀ...

Close