ವಿಂಧ್ಯಾಚಲ-ಶ್ರೀ ದೇವರಹಾ ಹಂಸಬಾಬಾ

ಕಿನ್ನಿಗೋಳಿ: ಭಕ್ತಿ, ಧ್ಯಾನ, ಯೋಗ ಚಿಂತನೆಯ ಮೂಲಕ ಗುರು ಹಾಗೂ ಕೃಷ್ಣನಲ್ಲಿ ಶರಣಾಗತಿ ಪಡೆದಾಗ ನಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗಿ ಮಾನಸಿಕ ಸಂತುಲತೆ ಹೆಚ್ಚಾಗುವುದು. ಎಂದು ವಿಂಧ್ಯಾಚಲದ ಶ್ರೀ ದೇವರಹಾ ಹಂಸಬಾಬಾ ವಿಂಧ್ಯಾಚಲ ಹೇಳಿದರು.
ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಶಕ್ತಿದರ್ಶನ ಯೋಗಾಶ್ರಮದಲ್ಲಿ ಸೋಮವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
5000 ವರ್ಷಗಳ ಪ್ರಾಚೀನ ಇತಿಹಾಸ ವಿರುವ ಅಖಂಡ ಭಾರತದಲ್ಲಿ ಇಂದಿಗೂ ಏಕತೆ ಐಕ್ಯತೆ ಸಾಮರಸ್ಯ ಹಾಸುಹೊಕ್ಕಾಗಿದೆ. ಪ್ರಜಾಪ್ರಭುತ್ವ, ಲೌಕಿಕ, ಅಲೌಕಿಕ ಧಾರ್ಮಿಕತೆ, ಸರ್ವ ಧರ್ಮ ಸಮನ್ವತೆಯಿಂದ ಭಾರತ ವಿಶ್ವದಲ್ಲಿ ಉತ್ತುಂಗ ಸ್ಥಾನದಲ್ಲಿದೆ.
ಗುರುಕುಲ ಪದ್ದತಿಯಿರುವ ನಮ್ಮ ಭಾರತದಲ್ಲಿ ಮಕ್ಕಳಿಗೆ ನೈತಿಕತೆ, ಧಾರ್ಮಿಕ ಶ್ರದ್ಧೆ, ಸಂಸ್ಕಾರಭರಿತ ಮೌಲ್ಯಯುತ ಶಿಕ್ಷಣ ನೀಡಿದಲ್ಲಿ ಭವ್ಯ ಸಮಾಜದ ನಿರ್ಮಾಣವಾಗುತ್ತದೆ. ಎಂದು ಹೇಳಿದರು.
ಯೋಗಾಶ್ರಮದ ಮುಖ್ಯಸ್ಥ ದೇವದಾಸ್ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ರಾಜ್ಯಗಳು, ದೇಶ ವಿದೇಶಗಳ 200 ಕ್ಕೂ ಮಿಕ್ಕಿ ಭಕ್ತಾದಿಗಳು ಬಾಬಾರ ದರ್ಶನ ಪಡೆದರು.

Kinnigoli-10021608

Comments

comments

Comments are closed.

Read previous post:
Kateel-10021606
ಕಟೀಲು ಜಿಲ್ಲಾ ಪಂಚಾಯಿತಿ

ಕಿನ್ನಿಗೋಳಿ: ಪುರಾಣ ಪ್ರಸಿದ್ಧ ಕಟೀಲು ದೇವಳವನ್ನು ಹೊಂದಿರುವ ಕಟೀಲು ಜಿಲ್ಲಾ ಪಂಚಾಯಿತಿ ಕ್ಷೇತ್ರ ನಿಡ್ಡೋಡಿಯಿಂದ ಚೇಳ್ಯಾರು ತನಕ ನಂದಿನಿ ನದಿಯ ತೀರವನ್ನು ಹೊಂದಿರುವ ಕೃಷಿಯಾಧರಿತ ವಿಶಿಷ್ಟ ಜಿಲ್ಲಾ ಪಂಚಾಯಿತಿಯಾಗಿದೆ....

Close