ದುರ್ವಾಸನೆಯುಕ್ತ ದಟ್ಟ ಹೊಗೆ

ಮೂಲ್ಕಿ: ಮೂಲ್ಕಿ ನಗರ ಪಂಚಾಯತಿಯ ಅತ್ಯಾಧುನಿಕ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ತ್ಯಾಜ್ಯ ವಸ್ತುಗಳಿಗೆ ಬೆಂಕಿ ಕೊಟ್ಟ ಪರಿಣಾಮ ದುರ್ವಾಸನೆಯುಕ್ತ ದಟ್ಟ ಹೊಗೆ ಪ್ರದೇಶದಲ್ಲೆಲ್ಲಾ ಹಬ್ಬಿ ವಾಹನ ಚಾಲಕರಿಗೆ, ಪಾದಾಚಾರಿಗಳಿಗೆ ಹಾಗೂ ಪರಿಸರದ ನಿವಾಸಿಗಳಿಗೆ ಸಮಸ್ಯೆಯಾಗಿದೆ.
ಮೂಲ್ಕಿ ವೆಂಕಟರಮಣ ದೇವಸ್ಥಾನದ ದಾರಿಯಲ್ಲಿ ಮೆಡಲಿನ್ ಹೈಸ್ಕೂಲು ಎದುರು ಸಾರ್ವಜನಿಕರ ವಿರೋಧದ ನಡುವೆಯೂ ಅಗತ್ಯ ಎಂಬಂತೆ ಸ್ಥಾಪನೆಯಾದ ತ್ಯಾಜ್ಯ ಶೇಖರಣೆ ಹಾಗೂ ನಿರ್ವಹಣಾ ಕೇಂದ್ರದಲ್ಲಿ ತ್ಯಾಜ್ಯಗಳಿಗೆ ನೇರವಾಗಿ ಬೆಂಕಿ ಕೊಟ್ಟಿರುವ ಪರಣಾಮ ಸಮಸ್ಯೆ ಉಂಟಾಗಿದೆ.
ಈ ಕೇಂದ್ರದಲ್ಲಿ ತ್ಯಾಜ್ಯ ವಿಂಗಡನೆ ಕಾಂಪೋಷ್ಟು ವ್ಯವಸ್ಥೆ ಇದ್ದರೂ ತ್ಯಾಜ್ಯಗಳಿಗೆ ನೇರವಾಗಿ ಬೆಂಕಿ ಕೊಟ್ಟಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.
ಮೂಲ್ಕಿಯ ವೆಂಕಟರಮಣ ದೇವಸ್ಥಾನದಲ್ಲಿ ರಜತ ರಥ ಹಾಗೂ ಸ್ವಾಮೀಜಿಯವರ ದಿಗ್ವಿಜಯ ಸಂಬಂಧಿತ ಕಾರ್ಯಕ್ರಮಗಳಿರುವುದರಿಂದ ಅವಿಭಜಿತ ಜಿಲ್ಲೆಯ ಹಾಗೂ ಹೊರ ರಾಜ್ಯಗಳು ಮತ್ತು ವಿದೇಶದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು ದೇವಳ ಜನ ನಿಭಿಡತೆಯಿಂದ ತುಂಬಿದೆ ದೇವಳದ ಹೊರ ಪ್ರಾಂಗಣದ ವರೆಗೂ ಈ ಹೊಗೆ ಹಬ್ಬುತ್ತಿರುವ ಕಾರಣ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Mulki-10021603

Comments

comments

Comments are closed.

Read previous post:
Mulki-10021602
ನೀರಿನ ಸಂರಕ್ಷಣೆ ಭವಿಷ್ಯದ ದೃಷ್ಟಿಯಲ್ಲಿ ಅಗತ್ಯ

ಮೂಲ್ಕಿ: ಭವಿಷ್ಯದಲ್ಲಿ ನೀರಿಗಾಗಿ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಲು ಹೆಚ್ಚು ಸಮಯ ಬೇಕಾಗಿಲ್ಲ, ಮಳೆಯ ಪ್ರಮಾಣ ಗಣನೀಯವಾಗಿ ಕುಂಠಿತಗೊಂಡಿರುವುದರಿಂದ ಅಂತರ್ಜನದ ಬಗ್ಗೆ ಮಾಹಿತಿ ಅಗತ್ಯವಾಗಿದೆ. ಹಿಂದೆ ಹಳ್ಳಗಳು...

Close