ಧಾರ್ಮಿಕ ಸಭಾ ಕಾರ್ಯಕ್ರಮ

ಮೂಲ್ಕಿ: ಸಮಾಜ ಸಾಮರಸ್ಯ ಹಾಗೂ ಅಭಿವೃದ್ಧಿಗಾಗಿ ನಾರಾಯಣ ಗುರುಗಳ ಸಂದೇಶವು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ಎಲ್ಲರೂ ತಮ್ಮ ಜೀವನಕ್ರಮದಲ್ಲಿ ಈ ತತ್ವಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತುಳುಸಾಹಿತ್ಯ ಅಕಾಡೆಮಿಯ ನಿಕಟಪೂರ್ವಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕೆ.ಎಸ್. ರಾವ್ ನಗರದ ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ 32ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಂಗಳೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಸಂಘಟನೆ ಶಿಕ್ಷಣಮದುಶ್ಚಟ ನಿವಾರಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ತೋರಿದ ಆದರ್ಶ ಎಲ್ಲರಿಗೂ ದಾರಿ ದೀಪವಾಗಿದ್ದು ಎಲ್ಲರೂ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಗಳಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯ ಬೇಕು ಎಂದರು
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ವಹಿಸಿದ್ದರು.
ಈ ಸಂದರ್ಭ ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಉದ್ಯಮಿ ನವೀನ್ ಚಂದ್ರ ಸುವರ್ಣ, ಮುಲ್ಕಿ ನಗರ ಪಂ.ಸದಸ್ಯರಾದ ಶೈಲೇಶ್, ಹಸನ್ ಬಶೀರ್,ಸಂಸ್ಥೆಯ ಅಧ್ಯಕ್ಷ ರಾಘವ ಸುವರ್ಣ, ಮಹಿಳಾ ಮಂಡಲದ ಅಧ್ಯಕ್ಷೆ ಸುಮತಿ ಜಿ.ಪೂಜಾರಿ, ಗೌ.ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಎಸ್.ಕೋಟ್ಯಾನ್. ಉಪಾಧ್ಯಕ್ಷ ನೀಲಯ್ಯ ಅಮೀನ್, ಕೋಶಾಧಿಕಾರಿ ಅಶೋಕ್ ಅಮೀನ್,  ಜತೆ ಕಾರ್ಯದರ್ಶಿ ಮಥುರಾ ಸುವರ್ಣ, ಗಣೇಶ್ ಪೂಜಾರಿ,  ಭಜನಾ ಸಂಚಾಲಕ ಜಯರಾಮ ಎಸ್.ಸಾಲ್ಯಾನ್
ಮತ್ತಿತರರು ಉಪಸ್ಥಿತರಿದ್ದರು. ರಾಘವ ಸುವರ್ಣ, ಸ್ವಾಗತಿಸಿದರು. ಜನಾರ್ಧನ ಬಂಗೇರಾ ನಿರೂಪಿಸಿದರು. ಹರೀಶ್ಚಂದ್ರ ಎಸ್. ಕೋಟ್ಯಾನ್ ವಂದಿಸಿದರು.

Mulki-10021601

Comments

comments

Comments are closed.

Read previous post:
Mulki-09021604
ವಾರ್ಷಿಕ ಪೂಜೆ ಹಾಗೂ ಪ್ರಾರ್ಥನಾಕೂಟ

ಮೂಲ್ಕಿ: ಯಶಸ್ವಿ ಸಮಾಜ ನಿರ್ಮಾಣದಲ್ಲಿ ಮುಖ್ಯ ಪಾತ್ರವಹಿಸುವ ಮಹಿಳೆಯನ್ನು ಮಾತೆ ಮರಿಯಮ್ಮನವರ ರೂಪದಲ್ಲಿ ಗೌರವಿಸಲು ಪವಿತ್ರ ಬೈಬಲ್ ತಿಳಿಸುತ್ತದೆ ಎಂದು ಶಿರ್ವಾ ರೆಕ್ಟರ್ ಸಿಮಾವ್ ಫೆರ್ನಾಂಡೀಸ್ ಹೇಳಿದರು....

Close