ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆಯಿರಿ

ಕಿನ್ನಿಗೋಳಿ: ಕಳೆದ ಚುನಾವಣೆಯಲ್ಲಿ ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡಿದ್ದು ಈ ಬಾರಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಜಿ.ಪಂ. ಮತ್ತು ತಾ.ಪಂ.ನಲ್ಲಿ ಕಾಂಗ್ರೆಸ್ ಗೆಲ್ಲುವ ಭರವಸೆ ನಮಗಿದ್ದು ಅಭಿವೃದ್ಧಿ ನಡೆಸಲು ಇದು ಕೂಡಾ ಸಹಕಾರಿಯಾಗಲಿದೆ. ಹಿಂದಿನ ಚುನಾಯಿತ ಜಿ.ಪಂ. ಸದಸ್ಯರು ಅಭಿವೃದ್ಧಿ ಮಾಡದೇ ವೃಥಾ ಕಾಲಹರಣ ಮಾಡಿದ್ದಾರೆ ಎಂದು ಸಚಿವ ಕೆ. ಅಭಯಚಂದ್ರ ಜೈನ್ ಆರೋಪಿಸಿದರು.
ಗುರುವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ದ.ಕ. ಜಿ.ಪಂ. ಮಾಜಿ ಅಧ್ಯಕ್ಷೆ ಸುಗಂಧಿ ಎಸ್.ಕೊಂಡಾಣ, ಜೆಡಿಎಸ್‌ನ ನಿಸಾರ್ ಅಹ್ಮದ್, ಕೆ.ಎಂ.ಹಸನಬ್ಬ, ಸಂದೀಪ್ ಚೌಟ, ಆಸೀಫ್ ಹಾಗೂ ಎಸ್‌ಡಿಪಿಐನ ಹುಸೈನ್ ಅವರನ್ನು ಪಕ್ಷದ ಧ್ವಜ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದರು.
ಮೂಲ್ಕಿ ಪ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ಆಸಿಫ್, ಅಬೂಬಕರ್, ಜಿ. ಪಂ. ಅಭ್ಯರ್ಥಿ ಪ್ರಮೋದ್‌ಕುಮಾರ್, ತಾ.ಪಂ. ಅಭ್ಯರ್ಥಿಗಳಾದ ಜೊಸ್ಸಿ ಪಿಂಟೋ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಕಾಂಗ್ರೆಸ್ ನಾಯಕರಾದ ಗುಣಪಾಲ ಶೆಟ್ಟಿ, ಗುರುರಾಜ್ ಪೂಜಾರಿ, ವಸಂತ ಬೆರ್ನಾರ್ಡ್, ಶಾಲೆಟ್ ಪಿಂಟೋ, ಫಿಲೋಮಿನಾ ಸಿಕ್ವೇರಾ, ಉಮಾವತಿ, ವಾಹಿದ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-12021601

Comments

comments

Comments are closed.

Read previous post:
Kinnigoli-11021604
ಭ್ರಾಮರೀ ವಿಲಾಸ್‌ -ಶಿಲಾನ್ಯಾಸ

ಕಟೀಲು: ಮಣಿದ್ವೀಪ್ ಡೆವಲಪರ್ಸ್ ಅವರಿಂದ ಕಟೀಲು ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ಆಧುನಿಕ ವಿನ್ಯಾಸದ ಸುಸಜ್ಜಿತವಾದ ಮೊದಲ ವಸತಿ ಸಮುಚ್ಚಯ ಭ್ರಾಮರಿ ವಿಲಾಸ್‌ ಬುಧವಾರ ವಾಸುದೇವ ಭಟ್ ಕಾರ್ಕಳ ಅವರ ಪೌರೋಹಿತ್ಯದಲ್ಲಿ...

Close