ಕಾಂಗ್ರೇಸ್ ಕಾರ್ಯಕರ್ತರ ಸಭೆ

ಕಿನ್ನಿಗೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಯೋಜನೆಯಾದ ಉಚಿತ ಅಕ್ಕಿ ವಿತರಣೆ, ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಅಭಿವೃದ್ಧಿಹಾಗೂ ಜನಪಯೋಗಿ ಯೋಜನೆಗಳನ್ನು ಜನತೆಯ ಮುಂದಿಟ್ಟು ಮತಯಾಚಿಸಬೇಕು ಎಂದು ಮುಲ್ಕಿ ಮೂಡಬಿದ್ರೆ ಶಾಸಕ, ಯುವಜನ ಸೇವೆ, ಕ್ರೀಡಾ ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್ ಕರೆಯಿತ್ತರು.
ಕಟೀಲು ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಶೈಲಾ ಸಿಕ್ವೇರಾ ಅವರ ಮಾರಡ್ಕ ಮನೆಯಲ್ಲಿ ಗುರುವಾರ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಕಟೀಲು ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಶೈಲಾ ಸಿಕ್ವೇರಾ, ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಪ್ರಮೋದ್ ಕುಮಾರ್, ಮೋನಪ್ಪ ಶೆಟ್ಟಿ ಎಕ್ಕಾರು, ಅಬೂಬಕರ್ ಕಾರ್ನಾಡ್, ಗುಣಪಾಲ ಶೆಟ್ಟಿ, ಉಮಾವತಿ, ಸುಬ್ರಹ್ಮಣ್ಯ ಭಟ್, ಕಲ್ಲಮುಂಡ್ಕೂರು ತಾ.ಪಂ. ಅಭ್ಯರ್ಥಿಗಳಾದ ಸುಕುಮಾರ್, ಮಾಲತಿ ಶೆಟ್ಟಿ, ತಿಮ್ಮಪ್ಪ ಕೊಟ್ಯಾನ್, ಸುನಿಲ್ ಸಿಕ್ವೇರಾ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಗುರುರಾಜ್ ಪೂಜಾರಿ, ವಸಂತ್ ಬೆರ್ನಾರ್ಡ್ ಮತ್ತಿತರರು ಉಪಸ್ಥಿತರಿದ್ದರು.

Kateel-13021601

Comments

comments

Comments are closed.

Read previous post:
Mulki-12021604
40ನೇ ವಾರ್ಷಿಕ ಭಜನಾ ಮಂಗಲೋತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂಡವಲು ಉತ್ಸವದ ಪೂರ್ವಭಾವಿಯಾಗಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ವತಿಯಿಂದ ನಡೆದ 40ನೇ ವಾರ್ಷಿಕ ಭಜನಾ ಮಂಗಲೋತ್ಸವವನ್ನು ಉದ್ಯಮಿ...

Close