ಆಳ್ವಾಸ್ ಪ್ರಕೃತಿ ಚಿಕಿತ್ಸಾ, ಯೋಗ ವಿಜ್ಞಾನ

ಮೂಲ್ಕಿ: ಅಧುನಿಕ ವೈದ್ಯ ವಿಜ್ಞಾನ ಕೈಚೆಲ್ಲಿದ ವಿಷಯಗಳಿಗೆ ಭಾರತೀಯ ಪಾರಂಪರಿಕ ಆಯುರ್ವೇದ ಹಾಗೂ ಪ್ರಾಕೃತಿಕ ಚಿಕಿತ್ಸೆಗಳಲ್ಲಿ ಪರಿಹಾರವಿರುವ್ಯದರಿಂದ ಭಾರತೀಯ ಚಿಕಿತ್ಸಾ ಪದ್ದತಿಗಳ ಬಗ್ಗೆ ನಾವು ಆಸಕ್ತಿವಹಿಸುವುದು ಬಹಳ ಅಗತ್ಯ ಎಂದು ಪಡುಬಿದ್ರಿ ಅಂಚನ್ ಆಯುರ್ವೇದಿಕ್ ಸಂಸ್ಥೆಯ ಮುಖ್ಯಸ್ಥ ಆಯುರ್ವೇದ ತಜ್ಞ ಡಾ.ಎನ್.ಟಿ.ಅಂಚನ್ ಹೇಳಿದರು.
ಮೂಡಬಿದ್ರಿಯ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಮಹಾವಿದ್ಯಾಯಲಯದ ರಾಷ್ಟ್ರೀಯ ಸೇವಾಯೋಜನೆಯ ವತಿಯಿಂದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯುವ ಹತ್ತುದಿನಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಉಚಿತ ಶಿಭಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾಲ್ಕನೇ ವೇದವಾದ ಅಥರ್ವಣದ ಮೂರನೇ ಭಾಗವಾದ ಆಯುರ್ವೇದ ಎಂಬ ಚಿಕಿತ್ಸಾ ಪದ್ದತಿಯಲ್ಲಿ ನಿಯಮ ಪ್ರತ್ಯಾಹಾರಗಳು ಮುಖ್ಯವಾಗಿದ್ದು ವಾತ,ಪಿತ್ತ,ಕಫ ಎಂಬ ಮೂರು ವಿಧದಲ್ಲಿ ರೋಗಗಳನ್ನು ವಿಭಜಿಸಿ ಪ್ರಕೃತಿ ಜನ್ಯ ವಸ್ತುಗಳಿಂದ ಪರಿಣಾಮಕಾರಿಯಾಗಿ ನೀಡುವ ಚಿಕಿತ್ಸಾ ಪದ್ದತಿಅನನ್ಯವಾಗಿದೆ. ಈಗಾಗಲೇ ವಿಶ್ವದ ಬಹಳಷ್ಟು ರಾಷ್ಟ್ರಗಳು ಆಯುರ್ವೇದ ಪದ್ದತಿಯನ್ನು ಅವಲಂಭಿಸಿ ಅಧ್ಯಯನಗಳನ್ನು ನಡೆಸುತ್ತಿದ್ದು ಮುಂದೆ ಆಯುರ್ವೇದ ಪದ್ದತಿ ವಿಶ್ವ ಮಾನ್ಯವಾಗಲಿದೆ ಎಂದರು.
ಐಸ್‌ಕ್ರೀಮ್ ಹಾಗೂ ಊಟ: ಆಹಾರ ಪಚನಕ್ಕಾಗಿ ಹೊಟ್ಟೆಯಲ್ಲಿರುವ ಅಗ್ನಿ ಜನ್ಯ ಕ್ರೀಯೆ ಕಾರಣವಾಗಿದ್ದು ಊಟದ ಜೊತೆಗೆ ಐಸ್‌ಕ್ರೀಂ ಸಹಿತ ಶೀತಲೀಕೃತ ಪಾನಿಯ ಅಥವಾ ನೀರು ಕುಡಿಯವುದರ ಪರಿಣಾಮ ಆಹಾರ ಪಚನಗೊಳ್ಳದೆ ಸಂಧಿ ನೋವು ವಾತರೋಗ ರುಜಿನಗಳಿಗೆ ಕಾರಣವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ,ಪಾರಂಪರಿಕ ಚಿಕಿತ್ಸಾ ಪದ್ದತಿ ಆರೋಗ್ಯ ರಕ್ಷಣೆಗೆ ಬಹಳ ಮುಖ್ಯವಾಗಿದ್ದು ಈ ಪದ್ದತಿಯನ್ನು ಪರಿಚಯಿಸುವುದರ ಜೊತೆಗೆ ಉಚಿತ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಅತಿಥಿಗಳಾಗಿ ಮೂಲ್ಕಿ ಸಂಘದ ಗೌ.ಪ್ರಧಾನ ಕಾರ್ಯದರ್ಶಿ ರಮೇಶ್ ಅಮೀನ್ ಕೊಕ್ಕರಕಲ್, ರಂಗಕರ್ಮಿ ಮೂಲ್ಕಿ ಚಂದ್ರಶೇಖರ ಸುವರ್ಣ,ಮೂಲ್ಕಿ ರೋಟರಿ ಅಧ್ಯಕ್ಷ ರವಿಚಂದ್ರ, ಮೂಲ್ಕಿ ನೋಟರಿ ಮತ್ತು ನ್ಯಾಯವಾದಿ ಬಿಪಿನ್ ಪ್ರಸಾದ್, ಮೂಡಬಿದ್ರಿಯ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಮಹಾವಿದ್ಯಾಯಲಯದ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ,ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಓಂನಾಥ್ ಉಪಸ್ಥಿತರಿದ್ದರು.
ಡಾ.ವನಿತಾ ಶೆಟ್ಟಿ ಸ್ವಾಗತಿಸಿದರು. ಅಭಿಜ್ಞಾ ಮಿರೂಪಿಸಿದರು.ವರ್ಷಾ ವಂದಿಸಿದರು.

Mulki-13021604.

Comments

comments

Comments are closed.