ಶಾರದಾ ಭಜನಾ ಮಂಡಳಿಗೆ ಶಿಲಾನ್ಯಾಸ

ಸುರತ್ಕಲ್: ಭಜನಾ ಮಂದಿರಗಳು ಧರ್ಮ ಸಂಸ್ಕೃತಿಯ ಸಂಕೇತ, ದೇವರ ದ್ಯಾನದಿಂದ ಜೀವನದಲ್ಲಿ ಉನ್ನತಿ ಸಾಧ್ಯ ಎಂದು ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಸುರತ್ಕಲ್ ಎಂ.ಆರ್.ಪಿ.ಎಲ್. ಕಾಲನಿ ಚೇಳಾಯರು ಶ್ರೀ ಶಾರದಾಂಬ ದೇವಸ್ಥಾನ ಸಮಿತಿ (ರಿ) , ಇವರ ಶ್ರೀ ಶಾರದ ಭಜನಾ ಮಂಡಳಿಯ 30 ಲಕ್ಷ ರೂ.ವೆಚ್ಚದ ನೂತನ ಶ್ರೀ ಶಾರದಾಂಬ ಭಜನಾ ಮಂದಿರದ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಸುರತ್ಕಲ್ ಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಸ್.ದಾಸಮಯ್ಯ, ಕಳವಾರುಗುತ್ತು ಚಿತ್ತರಂಜನ್ ಶೆಟ್ಟಿ, ಎಂ. ಆದಿತ್ಯ ಮುಕ್ಕಲ್ದಿ ಖಂಡಿಗೆ ಬೀಡು, ಮುಂಬೈ ಉದ್ಯಮಿ ನಾರಾಯಣ ಗುಜರನ್, ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ದಯಾನಂದ ಶೆಟ್ಟಿ ಖಂಡಿಗೆ ಬೀಡು, ಪ್ರಶಾಂತ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಶಾರಾದ ದೇವಸ್ಥಾನ ಕಾರ್ಯದರ್ಶಿ ಯಶೋಧರ್ ಕುಲಾಲ್, ಗುತ್ತಿಗೆದಾರವೇಣು ವಿನೂದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Mulki-13021601 Mulki-13021602

Comments

comments

Comments are closed.

Read previous post:
Kateel-13021601
ಕಾಂಗ್ರೇಸ್ ಕಾರ್ಯಕರ್ತರ ಸಭೆ

ಕಿನ್ನಿಗೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಯೋಜನೆಯಾದ ಉಚಿತ ಅಕ್ಕಿ ವಿತರಣೆ, ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಅಭಿವೃದ್ಧಿಹಾಗೂ ಜನಪಯೋಗಿ ಯೋಜನೆಗಳನ್ನು ಜನತೆಯ ಮುಂದಿಟ್ಟು ಮತಯಾಚಿಸಬೇಕು ಎಂದು ಮುಲ್ಕಿ...

Close