ಅಭಿವೃದ್ದಿಗಾಗಿ ಸಂಘ ಸಂಸ್ಥೆಗಳು ಶ್ರಮಿಸಬೇಕು

ಕಿನ್ನಿಗೋಳಿ: ಅಭಿವೃದ್ದಿಗಾಗಿ ಸಂಘ ಸಂಸ್ಥೆಗಳು ಶ್ರಮಿಸಿದಾಗ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮಾಜ ಮುಂಚೂಣಿಯಲ್ಲಿರುತ್ತದೆ. ಎಂದು ಏಳಿಂಜೆ ನವಚೇತನ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ಶೆಟ್ಟಿ ಬಂಕೆಡಬಾವ ಹೇಳಿದರು.
ಏಳಿಂಜೆ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದ ವಠಾರದಲ್ಲಿ ಶನಿವಾರ ನಡೆದ ಏಳಿಂಜೆ ನವಚೇತನ ಯುವಕ ಮಂಡಲದ 29 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಯಶಸ್ವಿ ಉದ್ಯಮ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಶೆಟ್ಟಿ ಕೊಂಜಾಲುಗುತ್ತು , ಏಳಿಂಜೆ ಆದಿಜಾರಂದಾಯ ಬಂಟ ದೈವಸ್ಥಾನದ ಮೊಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಕೃಷಿಯಲ್ಲಿ ಸಾಧನೆಗೈದ ಸದಾನಂದ ಶೆಟ್ಟಿ, ಕ್ರೀಡಾ ಸಾಧಕ ದೇವೀಶ್ ಶೆಟ್ಟಿ ಐಕಳ, ಕುಶಲಕರ್ಮಿ ಜಯರಾಮ ಆಚಾರ್ಯ ಏಳಿಂಜೆ ಅವರನ್ನು ಸನ್ಮಾನಿಸಲಾಯಿತು. ಏಳಿಂಜೆ ಕೋಂಜಾಲು ಗುತ್ತು ದಿ| ಅಕ್ಕಿ ಸಂಕು ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿ ಕೋಂಜಾಲು ಗುತ್ತು ದಿವಾಕರ ಶೆಟ್ಟಿ, ಶಿಕ್ಷಕ ಸಾಯಿನಾಥ ಶೆಟ್ಟಿ, ಐಕಳ ಗ್ರಾ. ಪಂ. ಅಧ್ಯಕ್ಷ ದಿವಾಕರ ಚೌಟ, ದೇವಳ ಅರ್ಚಕ ಗಣೇಶ್ ಭಟ್ ಏಳಿಂಜೆ, ಸಂಜೀವ ಶೆಟ್ಟಿ ನಂದನ ಮನೆ, ಯೋಗೀಶ್ ರಾವ್ ಏಳಿಂಜೆ, ಗ್ರಾ. ಪಂ. ಉಪಾಧ್ಯಕ್ಷೆ ಸುಂದರಿ , ಪೂವಣ್ಣ ಪೂಜಾರಿ, ಅನಿಲ್ ಶೆಟ್ಟಿ ಕೋಂಜಾಲುಗುತು, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮಣ್ ಬಿ. ಬಿ. ಸ್ವಾಗತಿಸಿದರು. ಕೃಷ್ಣ ಮೂಲ್ಯ ವರದಿ ವಾಚಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15021606

Comments

comments

Comments are closed.

Read previous post:
Kinnigoli-15021605
ನಿಡ್ಡೋಡಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಮುಚ್ಚೂರು- ನೀರುಡೆ ಲಯನ್ಸ್ ಕ್ಲಬ್, ನಿಡ್ಡೋಡಿ ಐ.ಸಿ.ವೈ.ಎಂ ಘಟಕ ಹಾಗೂ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಜಂಟೀ ಆಶ್ರಯದಲ್ಲಿ ರಕ್ತದಾನ ಶಿಬಿರ ಭಾನುವಾರ ನಿಡ್ಡೋಡಿ ಶ್ರೀಸತ್ಯನಾರಾಯಣ...

Close