ಉಚಿತ ಆರೋಗ್ಯ ತಪಾಸಣಾ ಶಿಭರ

ಮೂಲ್ಕಿ: ಗ್ರಾಮೀಣ ಬಡ ವರ್ಗದ ಜನರ ರೋಗ್ಯ ರಕ್ಷಣೆಯ ಮೂಲಕ ಸಮಾಜವನ್ನು ಅಭಿವೃದ್ಧಿಗೊಳಿಸುವ ಜಸ್ಟಿಸ್ ಕೆ.ಎಸ್.ಹೆಗ್ಡೆಯವರ ಕನಸನ್ನು ನನಸುಮಾಡುವಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿ ಶ್ರಮ ವಹಿಸುತ್ತಿದೆ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಸಹಾಯಕ ಅಧಿಕಾರಿ ಉದಯ್ ಹೇಳಿದರು.
ಮೂಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಯೋಗದೊಂದಿಗೆ ಮೂಲ್ಕಿ ಬಂಟರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಸ್ಥಳಿಯ ಸಂಘಟನೆಗಳ ಸಹಕಾರದೊಂದಿಗೆ ವಿವಿಧ ತಜ್ಞ ವೈದ್ಯರೊಂದಿಗೆ ಭೇಟಿ ನೀಡಿ ಆರೋಗ್ಯ ಪರೀಕ್ಷೆ ಹಾಗೂ ಹೆಚ್ಚುವರಿ ಚಿಕಿತ್ಸೆಯನ್ನು ದೇರಳಕಟ್ಟೆಯ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯಲ್ಲಿ ನೀಡಲಾಗುವುದು. ಗ್ರಾಮೀಣ ಬಡ ಜನರಿಗೆ ನೀಡಲಾಗುವ ಸರ್ಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಹಾಗೂ ಸಹಕಾರವನ್ನು ಆಸ್ಪತ್ರೆಯ ವತಿಯಿಂದ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆಯವರು ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ಜನರ ಸಹಕಾರಕ್ಕಾಗಿ ವಿವಿಧ ಯೋಜನೆಗಳನ್ನು ಬಂಟರ ಸಂಘದ ವತಿಯಿಂದ ರೂಪಿಸಲಾಗಿದೆ. ಆರ್ಥಿಕ ದುಸ್ಥಿತಿಯ ಸಮಾಜ ಭಾಂದವರಿಗಾಗಿ ಶಿಕ್ಷಣ,ಆರೋಗ್ಯ ಹಾಗೂ ಸಾಂಸ್ಕೃತಿಕ,ಸಮಾಜಿಕ ಕ್ಷೇತ್ರದಲ್ಲಿ ಸಹಾಯ ಸಹಕಾರ ನೀಡುತ್ತಿದ್ದು ಯುವ ಜನರಿಗಾಗಿ ಕ್ರೀಡಾ ಕ್ಷೇತ್ರದಲ್ಲಿಯೂ ಸಂಘ ಸಹಕಾರಗಳನ್ನು ನೀಡಿದೆ ಎಂದರು.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿ ವೈಧ್ಯಾಧಿಕಾರಿ ಡಾ.ಅಂಕುರ್, ಮೂಲ್ಕಿ ಬಂಟರ ಸಂಘದ ಪೂರ್ವಾಧ್ಯಕ್ಷ ಮುರಳೀಧರ ಭಂಡಾರಿ, ಕಿನ್ನಿಗೋಳಿ ಬಂಟರ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಮುಂಬೈ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸಹನಾ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಬಬಿತಾ ಶೆಟ್ಟಿ ಅತಿಥಿಗಳಾಗಿದ್ದರು.
ಬಬಿತಾ ಶೆಟ್ಟಿ ಸ್ವಾಗತಿಸಿದರು, ರಂಗಕರ್ಮಿ ಶರತ್ ಶೆಟ್ಟಿ ನಿರೂಪಿಸಿದರು,ಮಹಿಳಾ ವಿಭಾಗದ ಕಾರ್ಯದರ್ಶಿ ಕುಸುಮಾ ರವೀಂದ್ರ ಶೆಟ್ಟಿ ವಂದಿಸಿದರು.

Mulki-15021602

Comments

comments

Comments are closed.

Read previous post:
Mulki-15021601
ಶಾಂಭವಿ ಜೇಸಿಐ 2016 ರ ಸಾಲಿನ ಪದಗ್ರಹಣ

ಮೂಲ್ಕಿ: ಇಂದಿನ ದಿನಗಳಲ್ಲಿ ಮಾದಕ ವ್ಯಸನಕ್ಕೆ ಯುವ ಸಮಾಜ ಬಲಿಯಾಗುತ್ತಿದ್ದು ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಸಮುದಾಯಕ್ಕೆ ಜೇಸಿಐ ಸಂಸ್ಥೆ ಮೂಲಕ ಮಾರ್ಗದರ್ಶನ ನೀಡಿ ಅವರ ಭವಿಷ್ಯವನ್ನು...

Close