ಶಾಂಭವಿ ಜೇಸಿಐ 2016 ರ ಸಾಲಿನ ಪದಗ್ರಹಣ

ಮೂಲ್ಕಿ: ಇಂದಿನ ದಿನಗಳಲ್ಲಿ ಮಾದಕ ವ್ಯಸನಕ್ಕೆ ಯುವ ಸಮಾಜ ಬಲಿಯಾಗುತ್ತಿದ್ದು ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಸಮುದಾಯಕ್ಕೆ ಜೇಸಿಐ ಸಂಸ್ಥೆ ಮೂಲಕ ಮಾರ್ಗದರ್ಶನ ನೀಡಿ ಅವರ ಭವಿಷ್ಯವನ್ನು ರೂಪಿಸುವ ಕಾರ್ಯ ಪ್ರತಿ ಘಟಕ ಮಟ್ಟದಲ್ಲಿ ಆಗಬೇಕೆಂದು ಜೇಸಿಐನ ವಲಯ ಉಪಾಧ್ಯಕ್ಷ ರಕ್ಷಿತ್ ಕೆ ಹೇಳಿದರು.
ಮೂಲ್ಕಿ ಹೋಟೇಲ್ ಆಧಿಧನ್ ಸಭಾಂಗಣದಲ್ಲಿ ಜರಗಿದ ಮೂಲ್ಕಿ ಶಾಂಭವಿ ಜೇಸಿಐ 2016 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮೂಲ್ಕಿ ಶಾಂಭವಿ ಜೇಸಿಐನ 2016 ರ ಸಾಲಿನ ಅಧ್ಯಕ್ಷ ಮಲ್ಲಿಕಾರ್ಜುನ್ ಆರ್ ಕೆ ತಂಡದ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಮೂಲ್ಕಿ ಶಾಂಭವಿ ಜೇಸಿಐ ನ ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದರು. ಮೂಲ್ಕಿ ಪೋಲಿಸ್ ಠಾಣಾ ಸಹಾಯಕ ಉಪ ನಿರೀಕ್ಷಕ ವಾಮನ್ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಜೇಸಿಐ ವಲಯಾಧ್ಯಕ್ಷ ಸಂದೀಪ್ ಕುಮಾರ್, ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಗನಾಥ ಶೆಟ್ಟಿ, ಮೂಲ್ಕಿ ಶಾಂಭವಿ ಜೇಸಿಐ ಅಧ್ಯಕ್ಷ ಮಲ್ಲಿಕಾರ್ಜುನ್ ಆರ್ ಕೆ, ನೂತನ ಕಾರ್ಯದರ್ಶಿ ಗೀತಾ ಆರ್ ಕೆ ಮತ್ತಿತರರು ಉಪಸ್ಥಿತರಿದ್ದರು.

Mulki-15021601

Comments

comments

Comments are closed.

Read previous post:
Mulki-13021604.
ಆಳ್ವಾಸ್ ಪ್ರಕೃತಿ ಚಿಕಿತ್ಸಾ, ಯೋಗ ವಿಜ್ಞಾನ

ಮೂಲ್ಕಿ: ಅಧುನಿಕ ವೈದ್ಯ ವಿಜ್ಞಾನ ಕೈಚೆಲ್ಲಿದ ವಿಷಯಗಳಿಗೆ ಭಾರತೀಯ ಪಾರಂಪರಿಕ ಆಯುರ್ವೇದ ಹಾಗೂ ಪ್ರಾಕೃತಿಕ ಚಿಕಿತ್ಸೆಗಳಲ್ಲಿ ಪರಿಹಾರವಿರುವ್ಯದರಿಂದ ಭಾರತೀಯ ಚಿಕಿತ್ಸಾ ಪದ್ದತಿಗಳ ಬಗ್ಗೆ ನಾವು ಆಸಕ್ತಿವಹಿಸುವುದು ಬಹಳ...

Close