ಸೀಮಿತ ಒವರ್‌ಗಳ ಕ್ರಿಕೆಟ್ ಪಂದ್ಯಾ ಕೂಟ

ಮೂಲ್ಕಿ: ಕ್ರೀಡೆಯ ಮೂಲಕ ಸಂಘಟಿತರಾಗಿ ನಾರಾಣಗುರುಗಳ ಆದರ್ಶವನ್ನು ಜೀವನದಲ್ಲಿ ಪಾಲಿಸುವ ಯುವ ಸಮಾಜ ಶಾಂತಿಯ ಹರಿಕಾರರಾಗಿ ಮೂಡಿಬರಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸೇವಾದಳದ ಸಂಯೋಜನೆಯಲ್ಲಿ ಸಮಾಜ ಭಾಂಧವರಿಗಾಗಿ ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜು ಬಯಲಿನಲ್ಲಿ ಭಾನುವಾರ ನಡೆದ ಸೀಮಿತ ಒವರ್‌ಗಳ ಕ್ರಿಕೆಟ್ ಪಂದ್ಯಾ ಕೂಟ ಉದ್ಘಾಟಿಸಿ ಮಾತನಾಡಿದರು.
ಯುವ ಸಮಾಜ ಕ್ರೀಡೆಯಲ್ಲಿ ಸಂಘಟಿತರಾದಂತೆ ಸಮಾಜದ ಅಭಿವೃದ್ಧಿಯಲ್ಲಿ ಸಹಾಯ ನೀಡಬೇಕು ಶಿಕ್ಷಣ ಹಾಗೂ ಸಂಘಟನೆಗಾಗಿ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸೇವಾದಳದ ದಳಪತಿ ಸತೀಶ್ ಅಂಚನ್ ವಹಿಸಿದ್ದರು. ಅತಿಥಗಳಾಗಿ ಸಂಘದ ಪೂರ್ವಾಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಗೌ.ಪ್ರಧಾನ ಕಾರ್ಯದರ್ಶಿ ರಮೇಶ್ ಅಮೀನ್ ಕೊಕ್ಕರಕಲ್, ಉದ್ಯಮಿ ರಾಜೇಶ್ ಬಿ.ಅಮೀನ್, ತಾರಾನಾಥ ಕೊಕ್ಕರಕಲ್ ಅತಿಥಿಯಾಗಿದ್ದರು.
ಸತೀಶ್ ಅಂಚನ್ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕೊಲಕಾಡಿ ನಿರೂಪಿಸಿದರು. ಮೋಹನ ಸುವರ್ಣ ವಂದಿಸಿದರು.

Mulki-15021603

Comments

comments

Comments are closed.

Read previous post:
Mulki-15021602
ಉಚಿತ ಆರೋಗ್ಯ ತಪಾಸಣಾ ಶಿಭರ

ಮೂಲ್ಕಿ: ಗ್ರಾಮೀಣ ಬಡ ವರ್ಗದ ಜನರ ರೋಗ್ಯ ರಕ್ಷಣೆಯ ಮೂಲಕ ಸಮಾಜವನ್ನು ಅಭಿವೃದ್ಧಿಗೊಳಿಸುವ ಜಸ್ಟಿಸ್ ಕೆ.ಎಸ್.ಹೆಗ್ಡೆಯವರ ಕನಸನ್ನು ನನಸುಮಾಡುವಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿ ಶ್ರಮ ವಹಿಸುತ್ತಿದೆ...

Close