ಜನಾರ್ಧನ ಪೂಜಾರಿ ಮತ ಯಾಚನೆ

ಕಿನ್ನಿಗೋಳಿ : ಕಿನ್ನಿಗೋಳಿ ಜಿಲ್ಲಾಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಾಂಗ್ರೇಸ್ ಅಭ್ಯರ್ಥಿಗಳ ಪರ ಕಿನ್ನಿಗೋಳಿಯಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮತಯಾಚನೆ ಮಾಡಿದರು.
ಕಿನ್ನಿಗೋಳಿಯಲ್ಲಿ ಪೇಟೆ ಪರಿಸರದಲ್ಲಿ ಸುಮಾರು ಹದಿನೈದು ವರ್ಷಗಳಿಂದ ಡ್ರೈನೇಜ್ ಸಮಸ್ಯೆಯನ್ನು ಯಾರು ಸರಿಪಡಿಸುತ್ತಿಲ್ಲ ಜನಪ್ರತಿನಿಧಿಗಳು ಪ್ರತೀವರ್ಷ ಆಶ್ವಾಸನೆಗಳನ್ನೇ ನೀಡುತ್ತಾರೆ ಹೀಗಾದಲ್ಲಿ ನಾವು ಯಾಕೆ ಮತದಾನ ಮಾಡಬೇಕು ಎಂದು ಮತದಾರರೊಬ್ಬರು ಪ್ರಶ್ನಿಸಿದರು. ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಪ್ರಮೋದ್‌ಕುಮಾರ್, ತಾಲೂಕು ಪಂಚಾಯಿತಿ ಅಭ್ಯರ್ಥಿ ಜೊಸ್ಸಿ ಎಡ್ವಿನ್ ಪಿಂಟೊ, ಗುರುರಾಜ್ ಪೂಜಾರಿ, ಯೋಗೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17021603

Comments

comments

Comments are closed.

Read previous post:
Kinnigoli-17021602
ನಳಿನ್ ಕುಮಾರ್ ಕಟೀಲ್ ಮತಯಾಚನೆ

ಕಿನ್ನಿಗೋಳಿ : ದಿರಿಸಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬಿಂಬಿಸಿಕೊಂಡು ದುಬಾರಿ ಮೌಲ್ಯದ ವಾಚ್ ಧರಿಸುವ ಮೂಲಕ ಆಡಂಬರ, ಧರ್ಪದ ರಾಜಕೀಯ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ನೇತೃತ್ವದ ಸರಕಾರ...

Close