ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ

ಹಳೆಯಂಗಡಿ: ಏಕಾಗ್ರೆತೆ ಹಾಗೂ ಭಗವಂತನ ಪ್ರೀತಿ ಗಳಿಕೆಗೆ ಭಜನಾ ಸಂಕೀರ್ಥನೆ ಬಹಳ ಪ್ರಭಾವಶಾಲಿ ಎಂದು ಶ್ರೀಕಾಶೀ ಮಠಾದೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಹಳೆಯಂಗಡಿಯ ವಿಠೋಭ ಭಜನಾ ಮಂದಿರಕ್ಕೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಅಗತ್ಯವಿರುವ ಮಾನಸಿಕ ಶಾಂತಿ ನೆಮ್ಮದಿಯ ಗಳಿಕೆಗೆ ಭಜನಾ ಮಂದಿರಗಳು ಪೂರಕವಾಗುತ್ತದೆ. ದೇವಳಗಳು ಆಗಮೋಕ್ತ ಸಂಪ್ರದಾಯ ಬಳಸುವ ಕಾರಣ ಪ್ರತೀಯೋಂದು ಕೈಕಂರ್ಯದಲ್ಲಿ ನಿಯಮ ಬಹಳ ಅಗತ್ಯ ಆದರೆ ಭಜನಾ ಮಂದಿರಗಳು ಇವುಗಳಿಂದ ಮುಕ್ತವಾಗಿ ಯಾವುದೇ ಸಮಯದಲ್ಲಿ ದೇವರನ್ನು ಸ್ತುತಿಸುವ ಮೂಲಕ ಮಾನಸಿಕ ಶಾಂತಿ ಗಳಿಕೆ ಸಾಧ್ಯ ಎಂದರು. ಈ ಸಂದರ್ಭ ಭಜನಾಮಂದಿರ ಹಾಗೂ ಶ್ರೀ ಅಣ್ಣಪ್ಪ ಯಾನೆ ಚರ್ಡಪ್ಪ ಶೆಣೈ ಟ್ರಸ್ಟ್ ವತಿಯಿಂದ ಶ್ರೀಗಳಿಗೆವಿಶೇಷ ಪಾದಪೂಜೆ ನೆರವೇರಿತು.
ಈ ಸಂದರ್ಭಜಿ.ಎಸ್.ಬಿ ದೇವಳ ಒಕ್ಕೂಟದ ಅಧ್ಯಕ್ಷ ಪಿ.ರಘುವೀರ ಭಂಡಾರ್ಕರ್, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಅತುಲ್ ಕುಡ್ವಾ, ಅರ್ಚಕರಾದ ಲಕ್ಷ್ಮೀನಾರಾಯಣ ಭಟ್,ಪ್ರಶಾಂತ ಭಟ್,ಪದ್ಮನಾಭ ಭಟ್,ಮುಂಡ್ಕೂರು ರಾಮದಾಸ್ ಕಾಮತ್,ಟ್ರಸ್ಟ್ ಅಧ್ಯಕ್ಷ ಸುರೇಶ್ ಶೆಣೈ, ಟ್ರಸ್ಟಿಗಳಾದ ಕೃಷ್ಣ ಶೆಣೈ,ಶಿವರಾಯ ಶೆಣೈ,ವಾಸುದೇವ ಶೆಣೈ, ಲಕ್ಷ್ಮಣ ಕಾಮತ್ ಭಜನಾ ಮಂದಿರದ ಅಧ್ಯಕ್ಷ ಗಣೇಶ ಕುಡ್ವಾ, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Mulki-17021902

Comments

comments

Comments are closed.

Read previous post:
Mulki-17021901
ಮೂಲ್ಕಿ ಮಂತ್ರ ಸರ್ಪ್ ಕ್ಲಬ್ ಗೆ ಅವಳಿ ಪ್ರಶಸ್ತಿ

ಮೂಲ್ಕಿ: ತಮಿಳುನಾಡಿನ ಕುಟ್ಟಿಕೊರಿಯನ್ ಸಮೀಪ ಮನಪ್ಪಾಡ್ ಸಮುದ್ರ ತೀರದಲ್ಲಿ ಮನಪ್ಪಾಡ್ ಸೈಲ್ ಆಂಡ್ ಶೋರ್ ಸ್ಪೋಟ್ಸ್ ಕ್ಲಬ್ ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜಿಸಿರುವ ರಾಷ್ಟ್ರಮಟ್ಟದ ಸಮುದ್ರ ಸಾಹಸ...

Close