ಪಂಚಾಯಿತಿ ಚುನಾವಣೆ

ಕಿನ್ನಿಗೋಳಿ: ಪುರಾಣ ಪ್ರಸಿದ್ಧಿ ಪುಣ್ಯ ಕ್ಷೇತ್ರ ಕಟೀಲು. ನಂದಿನಿ ನದಿ ತಟದಲ್ಲಿನ ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ವಿಶಿಷ್ಟವಾದ ಕ್ಷೇತವೇ ಕಟೀಲು ಜಿಲ್ಲಾ ಪಂಚಾಯಿತಿ ಕ್ಷೇತ್ರ. ಮೆನ್ನಬೆಟ್ಟು, ಎಕ್ಕಾರು, ಕಲ್ಲಮುಂಡ್ಕೂರು, ಚೇಳಾರು ತಾಲೂಕು ಪಂಚಾಯಿತಿಗಳು ಈ ವ್ಯಾಪ್ತಿಯಲ್ಲಿ ಬರುತ್ತದೆ.
ಮೆನ್ನಬೆಟ್ಟು ತಾಲೂಕು ಪಂಚಾಯಿತಿ
ಮೀಸಲಾತಿ ಹಿಂದುಳಿದ ಬಿ ವರ್ಗ – (ಮಹಿಳೆ).
ಮೆನ್ನಬೆಟ್ಟು ತಾಲೂಕು ಪಂಚಾಯಿತಿ ಎಲ್ಲ ಅಭ್ಯರ್ಥಿಗಳು ಹೊಸಮುಖಗಳಾಗಿದ್ದಾರೆ. ಇಲ್ಲಿ ಬಿಜೆಪಿ ಕಾಂಗ್ರೇಸ್ ನೇರ ಸ್ಪರ್ಧೆಯಿದೆ.
ಶ್ರೀPತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಹಾಗೂ ಸಂಘ ಸಂಸ್ಥೆಗಳ ಮೂಲಕ ಗುರುತಿಸಿಕೊಂಡ ಶುಭಲತಾ ಶೆಟ್ಟಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಅತ್ತೂರು ನಿವಾಸಿ ಮಾಲತಿ ಶೆಟ್ಟಿ ಕಾಂಗ್ರೇಸ್ ನಿಂದ ಸ್ಪರ್ಧಿಸುತ್ತಿದ್ದು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಬಂಟ ಸಮುದಾಯದ ಮಹಿಳೆಯರಾಗಿದ್ದು ಇವರ ವರ್ಚಸ್ಸಿನಿಂದ ಮತಗಳು ವಿಭಜನೆಯಾಗುವ ಸಂಭವವಿದೆ.
2010ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೇಬಿ ಸುಂದರ ಕೋಟ್ಯಾನ್ ವಿಜಯಿಯಾಗಿದ್ದರು. ಈ ವ್ಯಾಪ್ತಿಯ ಮೆನ್ನಬೆಟ್ಟು ಹಾಗೂ ಕಟೀಲು ಗ್ರಾಮ ಪಂಚಾಯಿತಿಗಳು ಬಿಜೆಪಿ ಆಡಳಿತ ಹೊಂದಿದ್ದು ಬಿಜೆಪಿಯ ಭದ್ರಕೋಟೆಯಾಗಿದೆ. ಕಾಂಗ್ರೇಸ್ ಕಾರ್ಯಕರ್ತರು ಶ್ರಮ ಪಡಬೇಕಾದ ಅನಿರ್ವಾಯತೆ ಇಲ್ಲಿದೆ.

(ಮೂಡಬಿದ್ರಿ ಸೀತಾರಾಮ ಆಚಾರ್ಯ) ಕಲ್ಲಮುಂಡ್ಕೂರು ಮೀಸಲಾತಿ ಸಾಮಾನ್ಯ.

ಪ್ರಸ್ತುತ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿಯ ಸದಸ್ಯ ಸುಕುಮಾರ ಸನಿಲ್ ಕಾಂಗ್ರೇಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಲವಾರು ವರ್ಷ ಸೇವಾನಿರತರಾಗಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ
ಸಕ್ರಿಯರಾಗಿದ್ದ ಸುಧಾಕರ ನಿಡ್ಡೋಡಿ ಬಿಜೆಪಿ ಪರ ಕಣದಲ್ಲಿದ್ದಾರೆ. ದಿನೇಶ್ ಕುಮಾರ್ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಜೆಡಿಎಸ್ ನೆಲಕಚ್ಚಿದ್ದು ಇಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಜೀವ ಮಡಿವಾಳ ಪPತರರಾಗಿ ಕಣದಲ್ಲಿದ್ದಾರೆ. ಇವರು ಕಟೀಲು ವಿವಿದೋದ್ದೇಶ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದು ಈ ಹಿಂದೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಪ್ರಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಜೆಡಿಎಸ್ ಪಕ್ಷದ ಪ್ರಬಲ ಕಾರ್ಯಕರ್ತರಾಗಿದ್ದರು.
2010 ರಲ್ಲಿ ಬಿಜೆಪಿಯ ಭವ್ಯಾ ಗಂಗಾಧರ ಅಲ್ಪ ಮತದ ಅಂತರದಿಂದ ಜಯಶಾಲಿಯಾಗಿದ್ದರು. ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಕಾಂಗ್ರೇಸ್ ಬೆಂಬಲಿತ ಆಡಳಿತವಿದ್ದು ಇಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ನೇರ ಸ್ಪರ್ಧೆಯಿದ್ದರೂ ಜೆಡಿಎಸ್. ಮತ್ತು ಪಕ್ಷೇತರರ ಮತಗಳು ರಾಷ್ಟ್ರೀಯ ಪಕ್ಷಗಳಿಗೆ ಮುಳುವಾಗಲಿದೆ ಯಾರೂ ಗೆದ್ದರೂ ಅಲ್ಪ ಮತದ ಅಂತರ ಇರುವ ಸಾಧ್ಯತೆ ಇದೆ.

Comments

comments

Comments are closed.

Read previous post:
Kinnigoli-17021605
ಗುಂಪುಗಾರಿಕೆ ಬಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಿ

ಕಿನ್ನಿಗೋಳಿ: ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಕಿನ್ನಿಗೋಳಿ, ಬಳ್ಕುಂಜೆ, ಕಿಲ್ಪಾಡಿ ಹಳೆಯಂಗಡಿ ತಾಲೂಕು ಪಂಚಾಯಿತಿ ಕ್ಷೇತ್ರಗಳು ಬರುತ್ತವೆ. ಕಿನ್ನಿಗೋಳಿ ಮತ್ತು ಹಳೆಯಂಗಡಿ ತಾ.ಪಂ. ಕ್ಷೇತ್ರಗಳು ಅಭಿವೃದ್ದಿ ಕಂಡ ಕ್ಷೇತ್ರಗಳಾಗಿವೆ....

Close