ಗುಂಪುಗಾರಿಕೆ ಬಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಿ

Kinnigoli-17021605

ಕಿನ್ನಿಗೋಳಿ: ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಕಿನ್ನಿಗೋಳಿ, ಬಳ್ಕುಂಜೆ, ಕಿಲ್ಪಾಡಿ ಹಳೆಯಂಗಡಿ ತಾಲೂಕು ಪಂಚಾಯಿತಿ ಕ್ಷೇತ್ರಗಳು ಬರುತ್ತವೆ. ಕಿನ್ನಿಗೋಳಿ ಮತ್ತು ಹಳೆಯಂಗಡಿ ತಾ.ಪಂ. ಕ್ಷೇತ್ರಗಳು ಅಭಿವೃದ್ದಿ ಕಂಡ ಕ್ಷೇತ್ರಗಳಾಗಿವೆ. ಪಕ್ಷಗಳ ಪ್ರಮುಖರು ಗುಂಪುಗಾರಿಕೆಯನ್ನು ಬಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಿದಲ್ಲಿ ಗೆಲವು ಶತಃಸಿದ್ಧ.

ಕಿನ್ನಿಗೋಳಿ ತಾಲೂಕು ಪಂಚಾಯಿತಿ
ಕಿನ್ನಿಗೋಳಿ ತಾ. ಪಂ. ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾತಿಗೆ ಬಂದಿದ್ದು ಕಿನ್ನಿಗೋಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿವಾಕರ ಕರ್ಕೇರ, ಕಾಂಗ್ರೇಸ್‌ನಿಂದ ಜೊಸ್ಸಿ ಎಡ್ವಿನ್ ಪಿಂಟೊ, ಪಕ್ಷೇತರರಾಗಿ ದೀಪಕ್ ರಾಜೇಶ್ ಕುವೆಲ್ಲೊ ಆಯ್ಕೆ ಬಯಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್‌ನ ರಾಜು ಕುಂದರ್ ಅಲ್ಪ ಮತಗಳಿಂದ ಜಯಗಳಿಸಿದ್ದರು. ಆದರೆ ಪರಿಸ್ಥಿತಿ ವಿಭಿನ್ನವಾಗಿದ್ದು ಜಿದ್ದಾ ಜಿದ್ದಿನ ಸ್ಪರ್ಧೆ ನಡೆಯುವುದು ಗ್ಯಾರಂಟಿ. ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಸ್ಪರ್ಧೆ ನಡೆಯಲಿದೆ.
ಬಿಜೆಪಿಯ ದಿವಾಕರ ಕರ್ಕೇರ ಪದವೀಧರರಾಗಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದ್ದು ಯುವಕರು ಇವರೊಂದಿಗಿದೆ. ಬಿಲ್ಲವರ ಮತಗಳು ಹೇಗೆ ಚಲಾವಣೆ ಗೊಳ್ಳುತ್ತದೆ ಎಂದು ಕಾದು ನೋಡಬೇಕು ಕಾಂಗ್ರೆಸ್‌ನ ಜೊಸ್ಸಿ ಎಡ್ವಿನ್ ಪಿಂಟೊ ಪದವಿಧರ, ಕವಿ, ಸಾಹಿತಿಯಾಗಿದ್ದು, ಎಲ್ಲರೊಡನೆ ಒಡನಾಟವಿದ್ದು ರೋಟರ‍್ಯಾಕ್ಟ್, ರೋಟರಿಯಂತಹ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡವರು. ಇವರಿಗೆ ಕ್ರೈಸ್ತ ಹಾಗೂ ಮುಸ್ಲಿಮರ ಓಟು ಕಟ್ಟಿಟ್ಟ ಬುತ್ತಿಯಂತಿದೆ. ಪಕ್ಷೇತರ ದೀಪಕ್ ರಾಜೇಶ್ ಕುವೆಲ್ಲೊ ಹೆಚ್ಚು ಮತ ಪಡೆದಷ್ಟು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಗೆಲುವಿನ ಆತಂಕ ಹೆಚ್ಚಾಗಬಹುದು.

ಬಳ್ಕುಂಜೆ ತಾಲೂಕು ಪಂಚಾಯಿತಿ
ಬಳ್ಕುಂಜೆ ತಾ.ಪಂ. ಕೃಷಿಯಾಧರಿತ ಗ್ರಾಮೀಣ ಪ್ರದೇಶವಾಗಿದ್ದು ಉಡುಪಿ ಜಿಲ್ಲೆಗೆ ತಾಗಿಕೊಂಡಿರುವ ಕ್ಷೇತ್ರ 2010 ರ ಚುನಾವಣೆಯಲ್ಲಿ ಕಾಂಗ್ರೇಸ್‌ನ ನೆಲ್ಸನ್ ಲೋಬೋ ಗೆದ್ದಿದ್ದರು. 2005ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ತಾ. ಪಂ. ಸದಸ್ಯೆ, ಗ್ರಾ. ಪಂ. ಸದಸ್ಯೆಯಾಗಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಅನುಭವವಿರುವ ಸುಜಾತಾ ಮೂಲ್ಯ, ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿಯಿಂದ ಪಿಯುಸಿ ವಿದ್ಯಾಭ್ಯಾಸ ಮಾಡಿರುವ ರಶ್ಮಿ ಆಚಾರ್ಯ ಅಭ್ಯರ್ಥಿಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿ ಕೊಂಡಿದ್ದು ಚೊಚ್ಚಲ ಬಾರಿಗೆ ಸ್ಪರ್ಧಾ ಕಣದಲ್ಲಿದ್ದಾರೆ. ಸುಲೋಚನಾ ಎಸ್. ಪೂಜಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಳ್ಕುಂಜೆ ಹಾಗೂ ಐಕಳ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಜಯಬೇರಿ ಬಾರಿಸಿವೆ. ಹಾಗಾಗಿ ಕಾಂಗ್ರೇಸ್ ಸಾಕಷ್ಟು ಶ್ರಮಪಡಬೇಕಾದ ಪ್ರಮೇಯವಿದೆ. ಜೆಡಿಎಸ್ ಮೂಲ್ಕಿ ಮೂಡಬಿದ್ರಿ ಕ್ಷೇತ್ರದಲ್ಲಿ ನೆಲಕಚ್ಚಿದ್ದು ಇಲ್ಲಿ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬರುವುದೇ ಎಂದು ನೋಡಬೇಕಾಗಿದೆ.

ಕಿಲ್ಪಾಡಿ ತಾಲೂಕು ಪಂಚಾಯಿತಿ
ಕೃಷಿಯನ್ನೇ ನಂಬಿಕೊಂಡ ಗ್ರಾಮೀಣ ಭಾಗವಾದ ಕಿಲ್ಪಾಡಿ ತಾಲೂಕು ಪಂಚಾಯತ್ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿದ್ದು ಕಾಂಗ್ರೇಸ್‌ನಿಂದ ಹಾಲಿ ಅತಿಕಾರಿಬೆಟ್ಟು ಗ್ರಾ.ಪಂ.ನ ಉಪಾಧ್ಯಕ್ಷ, ಸಮಾಜ ಸೇವಕ ಕಿಶೋರ್ ಶೆಟ್ಟಿ ದೆಪ್ಪಣಿಗುತ್ತು ಆಯ್ಕೆ ಬಯಸಿದರೆ, ಹೊಸಮುಖ ಯುವ ನಾಯಕ ಪದವೀಧರ ಶರತ್ ಕುಬೆವೂರು ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ.
2010 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ವನಿತಾ ಉದಯ ಅಮೀನ್ ಆಯ್ಕೆಯಾಗಿದ್ದರು. ಕಿಲ್ಪಾಡಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಪ್ರಾಬಲ್ಯವಿದ್ದರೆ ಅತಿಕಾರಿಬೆಟ್ಟುವಿನಲ್ಲಿ ಕಾಂಗ್ರೇಸ್ ಪ್ರಾಬಲ್ಯವಿದೆ. ಹಾಗಾಗಿ ಪಕ್ಷಗಳು ಮತದಾರರನ್ನು ಹೇಗೆ ಒಲೈಸುವರು ಎಂಬ ನೆಲೆಯಲ್ಲಿ ಗೆಲುವು ನಿರ್ಣಾಯಕವಾಗಲಿದೆ.

Comments

comments

Comments are closed.

Read previous post:
Kinnigoli-17021604
ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳ ಜಾತ್ರೆ

ಕಿನ್ನಿಗೋಳಿ :  ಕಿನ್ನಿಗೋಳಿ ಸಮೀಪದ ಏಳಿಂಜೆ ಲಕ್ಷ್ಮೀ ಜನಾರ್ಧನ ದೇವಳ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

Close