ನಳಿನ್ ಕುಮಾರ್ ಕಟೀಲ್ ಮತಯಾಚನೆ

ಕಿನ್ನಿಗೋಳಿ : ದಿರಿಸಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬಿಂಬಿಸಿಕೊಂಡು ದುಬಾರಿ ಮೌಲ್ಯದ ವಾಚ್ ಧರಿಸುವ ಮೂಲಕ ಆಡಂಬರ, ಧರ್ಪದ ರಾಜಕೀಯ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ನೇತೃತ್ವದ ಸರಕಾರ ರಾಜ್ಯದಲ್ಲಿ ಅಭಿವೃದ್ದಿ ಪರ ಕೆಲಸ ಮಾಡುತ್ತಿಲ್ಲ ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಟೀಲು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಭ್ಯರ್ಥಿಗಳ ಪರ ಮಂಗಳವಾರ ಪ್ರಚಾರ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜನಪರ ಕಾಳಜಿಯ ಸರಕಾರ ಎಂದು ಹೇಳಿಕೊಳ್ಳುವ ಕಾಂಗ್ರೇಸಿಗರು ರೈತರ ಆತ್ಮಹತ್ಯೆ ಕಾರಣ ಹುಡುಕಿ ಅವರಿಗೆ ಬೆಳೆಯಲ್ಲಿ ಬೆಂಬಲ ಬೆಲೆ ಯಾಕೆ ಕೊಡುತ್ತಿಲ್ಲ? ಕೇವಲ ಬಾಗ್ಯಗಳನ್ನು ಘೋಷಣೆ ಮಾಡಿಕೊಂಡು ಅದು ಸರಿಯಾಗಿ ಕಾರ್ಯ ನಿರ್ವಹಿಸುವುದೇ? ಜನರಿಗೆ ತಲುಪುತ್ತಿದೆಯೇ ಎಂದು ತಿಳಿದುಕೊಳ್ಳುತ್ತಿಲ್ಲ. ಕಾಂಗ್ರೇಸ್ ಸರಕಾರದ ವೈಪಲ್ಯತೆಯನ್ನು ಮತದಾರರು ಅರಿತ್ತಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿಯೊಂದೇ ಪರಿಹಾರ ಎಂದು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ 27 ಕಿಂತ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಅಭ್ಯರ್ಥಿಗಳಾದ ಶುಭಾಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ, ಸುಧಾಕರ್ ನಿಡ್ಡೋಡಿ, ಲೀಲಾವತಿ ರಾವ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜನಿ ಗುಜರನ್, ಸುಂದರ ಕಲ್ಲಮುಂಡ್ಕೂರು ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಜಗದೀಶ್ ಅಧಿಕಾರಿ, ಸುದರ್ಶನ್ ಮೂಡಬಿದ್ರೆ, ದೇವಪ್ರಸಾದ್ ಪುನರೂರು, ಚಾವಡಿ ಮನೆ ಜಗನಾಥ ಶೆಟ್ಟಿ, ಭುವನಾಭಿರಾಮ ಉಡುಪ, ಜನಾರ್ಧನ ಕಿಲೆಂಜೂರು, ತಿಲಕ್ ರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಎಳತ್ತೂರು, ಆದರ್ಶ್ ಶೆಟ್ಟಿ ಎಕ್ಕಾರು, ಜಯಶಂಕರ ರೈ, ಬೋಜರಾಜ ಸೂರಿಂಜೆ, ಸಚಿನ್ ಶೆಟ್ಟಿ ಅತ್ತೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-17021602

Comments

comments

Comments are closed.

Read previous post:
Kinnigoli-17021601
ಮಲ್ಲಿಕಾ ಪ್ರಸಾದ್ ಮತ ಯಾಚನೆ

ಕಿನ್ನಿಗೋಳಿ : ಬಿಜೆಪಿಯಿಂದ ಕಟೀಲು ಜಿಲ್ಲಾ ಪಂಚಾಯಿತಿ ಹಾಗೂ ಮೆನ್ನಬೆಟ್ಟು ತಾಲೂಕು ಪಂಚಾಯಿತಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಾನುವಾರ ಕಟೀಲು ಪರಿಸರದಲ್ಲಿ...

Close