ಬಿಲ್ಲವ ಟ್ರೋಫಿ 2016 ಫೆ.27-28 ರವರೆಗೆ

ಮೂಲ್ಕಿ: ರಾಜ್ಯಾದ್ಯಂತ ಬಿಲ್ಲವರ ಹಲವಾರು ಸಂಘಟನೆಗಳಿದ್ದು ಕೆಲವೊಂದು ಭಿನ್ನಾಭಿಪ್ರಾಯಗಳಿದ್ದು ಸಂಘಟನೆಯು ಬಲಯುತವಾಗುವ, ಸಮಾಜದ ಅಭಿವೃದ್ದಿಯ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಹೇಳಿದರು.
ಬಿಲ್ಲವ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಮೂಲ್ಕಿಯ ವಿಜಯ ಕಾಲೇಜಿನ ಕ್ರೀಡಾಂಗಣದಲ್ಲಿ ಫೆಬ್ರವರಿ 27ರಿಂದ 28 ರವರೆಗೆ ಜರಗಲಿರುವ ಅಂತರಾಷ್ತ್ರೀಯ ಮಟ್ಟದ ಅಹ್ವಾನಿತ ಬಿಲ್ಲವ ಸಂಘಟನೆಗಳ ಬಿಲ್ಲವ ಬಾಂಧವರಿಗಾರಿ ಜರಗಲಿರುವ ಬಿಲ್ಲವ ಟ್ರೋಫಿ 2016ರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಒಗ್ಗಟ್ಟಿನ ಕೊರತೆಯಿಂದ ಸಮಾಜ ಹಿಂದುಳಿದಿದ್ದು ರಾಜಕೀಯವಾಗಿ ,ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಮುಂದೆ ಬರಲು ರಾಜಕೀಯ ರಹಿತ ವಾತವರಣ ನಿರ್ಮಾಣ ಅಗತ್ಯವೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ತ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ ಸುವರ್ಣರು ಯುವ ಸಮುದಾಯ ಒಗ್ಗಟ್ಟಾಗಿ ರಾಜಕೀಯ,ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ದಿಯಾದಾಗ ಸಮಾಜದ ಅಭಿವೃದ್ದಿ ಸಾದ್ಯವೆಂದು ಹೇಳಿದರು. ಬಿಲ್ಲವ ಟ್ರೋಫಿ-2016 ರಲ್ಲಿ ಒಮಾನ್ ಬಿಲ್ಲವಾಸ್ ಮಸ್ಕತ್, ಬಿಲ್ಲವಾಸ್ ದುಬೈ,ಬಿಲ್ಲವ ಸಂಘ ಕುವೈತ್, ಗುರು ಸೇವಾ ಸಮಿತಿ ಬಹರೇನ್ ಬಿಲ್ಲವಾಸ್, ಬಿಲ್ಲವರ ಅಸೋಸಿಯೇಸನ್ ದೆಹಲಿ,ಗುಜರಾತ್ ಬಿಲ್ಲವ ಸಂಘ, ಬಿಲ್ಲವರ ಅಸೋಸಿಯಶನ್ ಮುಂಬೈ, ಭಾರತ್ ಬ್ಯಾಂಕ್, ಅಖಿಲ ಭಾರತ ಬಿಲ್ಲವರ ಯೂನಿಯನ್ , ಮಂಗಳೂರು. ಬಿಲ್ಲವ ಜಾಗೃತಿ ಬಳಗ ಮುಂಬೈ, ರಾಷ್ತ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ,ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಮಂಗಳೂರು.ಬಿಲ್ಲವರ ಅಸೋಸಿಯೇಶನ್ ಬೆಂಗಳೂರು,ಬಿಲ್ಲವರ ಪರಿಷತ್ ಉಡುಪಿ,ಯುವವಾಹಿನಿ,ಶ್ರೀ ನಾರಾಯಣ ಗುರು ಯುವ ವೇದಿಕೆ ಮಂಗಳುರು ಸೇರಿದಂತೆ 16 ತಂಡಗಳು ಭಾಗವಹಿಸಲಿದ್ದು ಪ್ರಥಮ ಬಹುಮಾನ ರೂ 2 ಲಕ್ಷ ಹಾಗೂ ದ್ವಿತೀಯ ಬಹುಮಾನ ರೂ 1 ಲಕ್ಷ ನೀಡಲಾಗುವುದೆಂದು ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಸುವರ್ಣ ತಿಳಿಸಿದರು.ಬಿಲ್ಲವರ ಅಸೋಸಿಯೇಶನ್ ಮುಂಬೈನ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮತ್ತಿತರರು ಉಪಸ್ತಿತರಿದ್ದರು.
ಬಿಲ್ಲವ ಕ್ರೀಡಾ ಸಮಿತಿಯ ಸಂಚಾಲಕ ಬಿಪಿನ್ ಪ್ರಸಾದ್ ಸ್ವಾಗತಿಸಿದರು.ಕಾರ್ಯಧ್ಯಕ್ಷ ಚಂದ್ರಶೇಖರ ಸುವರ್ಣ ಪ್ರಸ್ತಾವನೆಗೈದರು,ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು ವಂದಿಸಿದರು.ಸಹಾ ಸಂಚಾಲಕ ನರೇಂಧ್ರ ಕೆರೆಕಾಡು ನಿರೂಪಿಸಿದರು.

Mulki-17021903

Comments

comments

Comments are closed.

Read previous post:
Mulki-17021902
ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ

ಹಳೆಯಂಗಡಿ: ಏಕಾಗ್ರೆತೆ ಹಾಗೂ ಭಗವಂತನ ಪ್ರೀತಿ ಗಳಿಕೆಗೆ ಭಜನಾ ಸಂಕೀರ್ಥನೆ ಬಹಳ ಪ್ರಭಾವಶಾಲಿ ಎಂದು ಶ್ರೀಕಾಶೀ ಮಠಾದೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಹಳೆಯಂಗಡಿಯ ವಿಠೋಭ...

Close