ಮೂಲ್ಕಿ ಮಂತ್ರ ಸರ್ಪ್ ಕ್ಲಬ್ ಗೆ ಅವಳಿ ಪ್ರಶಸ್ತಿ

ಮೂಲ್ಕಿ: ತಮಿಳುನಾಡಿನ ಕುಟ್ಟಿಕೊರಿಯನ್ ಸಮೀಪ ಮನಪ್ಪಾಡ್ ಸಮುದ್ರ ತೀರದಲ್ಲಿ ಮನಪ್ಪಾಡ್ ಸೈಲ್ ಆಂಡ್ ಶೋರ್ ಸ್ಪೋಟ್ಸ್ ಕ್ಲಬ್ ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜಿಸಿರುವ ರಾಷ್ಟ್ರಮಟ್ಟದ ಸಮುದ್ರ ಸಾಹಸ ಸ್ಪರ್ದೆಯಲ್ಲಿ ಮೂಲ್ಕಿ ಮಂತ್ರ ಸರ್ಪ್ ಕ್ಲಬ್ ಸದಸ್ಯರು ಅವಳಿ ಪ್ರಶಸ್ತಿ ಗಳಿಸಿದ್ದಾರೆ.
ಸ್ಟೇಂಡ್ ಅಪ್ ಪೆಡಲ್ ವಿಭಾಗದಲ್ಲಿ ತನ್ವಿ ಜಗದೀಶ್ ಪ್ರಥಮ
ಹಾಗೂ ಸಿಂಚನಾ ಗೌಡ ದ್ವಿತೀಯ. ಮತ್ತು ಕಾಯಾಕಿಸ್ ನಲ್ಲಿ ಸಿಂಚನಾ ಗೌಡ ತೃತೀಯ ಪ್ರಶಸ್ತಿ ಪಡೆದಿದ್ದಾರೆ.
ಮಂತ್ರ ಸರ್ಪ್ ಕ್ಲಬ್ 15 ವಯೋಮಿತಿಯ ಒಳಗಿನ ಮಕ್ಕಳನ್ನು ಮೂಲ್ಕಿ ಕೊಳಚಿಕಂಬಳ ಬಳಿಯ ಶಾಂಭವಿ ನದಿಯಲ್ಲಿ ಹಾಗೂ ಸಮುದ್ರದಲ್ಲಿ ಉತ್ತಮ ತರಬೇತಿ ನೀಡಿರುವುದರಿಂದ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಮುಕ್ತ ಮಯೋಮಿತಿಯಲ್ಲಿ ಗಳಿಸಲು ಶಕ್ತರಾಗಿದ್ದಾರೆ ಈ ಸ್ಪರ್ದೆಯು ಕಠಿಣ ಸಮುದ್ರದಲ್ಲಿ ನಡೆದಿದ್ದು ಮಹಿಳೆಯರು ಹಾಗೂ ಪುರುಷರು ಸಮಾನಾಂತರ ಸ್ಪರ್ದೆಯನ್ನು ಎದುರಿಸಬೇಕಾಗಿದೆ ಎಂದು ಮಂತ್ರ ಸರ್ಪ್ ಕ್ಲಬ್ ತರಬೇತುದಾರ ಸನತ್ ಕುಮಾರ್ ತಿಳಿಸಿದ್ದಾರೆ.

Mulki-17021901

Comments

comments

Comments are closed.

Read previous post:
Kinnigoli-15021609
ಕೆರೆಕಾಡು ಬಿಜೆಪಿ ಮನೆಗಳಿಗೆ ತೆರಳಿ ಮತಯಾಚನೆ

 ಕಿನ್ನಿಗೋಳಿ : ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಹಾಗೂ ಈ ವ್ಯಾಪ್ತಿಯಲ್ಲಿ ಬರುವ ತಾಲೂಕು ಪಂಚಾಯಿತಿಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕಿನ್ನಿಗೋಳಿ ಸಮೀಪದ ಕೆರೆಕಾಡು ಪರಿಸರದಲ್ಲಿ ಬಿಜೆಪಿ...

Close