ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಕಿನ್ನಿಗೋಳಿ : ಬೀಡಿ ನಿಷೇಧ ಮೋದಿ ಸರಕಾರ ಮಾಡುವ ಹುನ್ನಾರದಲ್ಲಿದೆ ಎಂದು ಕಾಂಗ್ರೇಸಿಗರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಯಾವುದೇ ಕಾರಣಕ್ಕೂ ಬೀಡಿ ನಿಷೇಧ ಸಾಧ್ಯವಿಲ್ಲ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಜನ್ ಧನ್, ಅಟಲ್ ಪಿಂಚಣಿ, ಪ್ರಧಾನ ಮಂತ್ರಿ ಜೀವ ವಿಮಾಯೋಜನೆ ಮುಂತಾದ ಜನಪರ ಯೋಜನೆಗಳನ್ನು ನೀಡಿ ಜನರ ವಿಶ್ವಾಸವನ್ನು ಗಳಿಸಿದ್ದು ಕೇಂದ್ರ ಸರಕಾರದಿಂದ ನೇರ ಗ್ರಾಮಪಂಚಾಯತ್ ಗೆ ಅನುದಾನ ಒದಗಿಸುವ ಮೂಲಕ ಪಂಚಾಯತ್ ಅಭಿವೃದ್ದಿಗೆ ಸಹಕರಿಸಿದೆ. ಎಂದರು.
ಈ ಸಂದರ್ಭ ಕಾಂಗೇಸ್ ಕಾರ್ಯಕರ್ತರಾದ ಗೋಪಾಲ ಬಂಗೇರ , ಮೋಹನ್ ಬಂಗೇರ, ಚಂದ್ರಶೇಖರ ಪೂಜಾರಿ, ಗಣೇಶ್, ವಿಜಯ, ಕುಮಾರ್, ರಾಜೇಶ್, ದಯಾನಂದ, ಕೇಶವ, ರೋಕಿ ಡಿಸೋಜ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಜಯರಾಮ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಕಸ್ತೂರಿ ಪಂಜ, ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಅಭ್ಯರ್ಥಿಗಳಾದ, ದಿವಾಕರ ಕರ್ಕೇರ, ಶುಭಲತ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ, ಶರತ್ ಕುಬೆವೂರು, ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಜಗದೀಶ್ ಅಧಿಕಾರಿ, ಸುದರ್ಶನ್ ಮೂಡಬಿದ್ರೆ, ಕೆ,ಆರ್. ಪಂಡಿತ್, ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ಬೇಬಿ ಸುಂದರ್ ಕೋಟ್ಯಾನ್, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್ ಮತ್ತಿತರರು ಇದ್ದರು.
ಪಿ.ಕೆ ಶೆಟ್ಟಿ ಸ್ವಾಗತಿಸಿ, ಜಯಾನಂದ ಚೇಳ್ಯಾರು ವಂದಿಸಿದರು, ಅರ್ಪಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-17021608

Comments

comments

Comments are closed.

Read previous post:
Kinnigoli-17021607
ಕಿನ್ನಿಗೋಳಿ ರಸ್ತೆ ಜಾಥಾ

ಕಿನ್ನಿಗೋಳಿ: ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಿಮಿತ್ತ ಕಿನ್ನಿಗೋಳಿ ಪೇಟೆ ಪರಿಸರದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ರಸ್ತೆ ಜಾಥ ನಡೆಸಿದರು.

Close