ಕಿನ್ನಿಗೋಳಿ ಮತ್ತು ಕಟೀಲು ಜಿಲ್ಲಾ ಪಂಚಾಯಿತಿ

Kinnigoli-19021607

ಕಿನ್ನಿಗೋಳಿ: ಜಿಲ್ಲೆಯ ಪ್ರತಿಷ್ಠಿತ ಕಣವಾಗಿರುವ ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಚುನಾವಣಾ ಕ್ಷೇತ್ರದ ಏಳಿಂಜೆಯಲ್ಲಿ ಬೆಳಿಗ್ಗೆ ಸುಮಾರು 20 ನಿಮಿಷಗಳ ಕಾಲ ಮತದಾನ ಯಂತ್ರದ ತಾಂತ್ರಿಕ ವೈಫಲ್ಯದಿಂದ ತಡವಾಗಿ ಮತದಾನ ಪ್ರಾರಂಭವಾಯಿತು. ಕರ್ನಿರೆ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತೊಂದರೆ ಕಂಡು ಬಂದು 15 ನಿಮಿಷ ತಡವಾಗಿ ಮತದಾನ ಆರಂಭವಾಯಿತು.
ಕಿನ್ನಿಗೋಳಿ ಬಳಿಯ ಶಿಮಂತೂರು ಶಾರದಾ ಫ್ರೌಢಶಾಲೆಯು ಈ ವರ್ಷದಲ್ಲಿಯೇ ಶಾಲೆ ಮುಚ್ಚುಗಡೆ ಆಗಲಿದ್ದು ಈ ಬಾರಿ ಇಲ್ಲಿ ಕೊನೆಯ ಮತದಾನ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಕಿನ್ನಿಗೋಳಿ ಬಳಿಯ ಪದ್ಮನೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಂದೇ ಶಾಮಿಯಾನದ ಅಡಿಯಲ್ಲಿ ಕುಳಿತುಕೊಂಡು ಮತದಾರರಿಗೆ ಮಾಹಿತಿ ನೀಡುತ್ತಿರುವುದು ವಿಶೇಷವೆನಿಸಿತ್ತು.

ಕಟೀಲು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಯಂಗಡಿ ನಡುಗೋಡು ಹಳೆ ಪಂಚಾಯಿತಿ ಕಟ್ಟಡದ (ಮತಗಟ್ಟೆ 117) ತಾಲೂಕು ಪಂಚಾಯಿತಿಯ ಮತದಾನ ಯಂತ್ರದ ದೋಷ ಕಂಡು ಬಂದಿತ್ತು ಮಂಗಳೂರು ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಬೇರೆ ಮತದಾನ ಯಂತ್ರ ಪೂರೈಸಿದ ಬಳಿಕ ಸುಮಾರು ಒಂದೂವರೆ ಗಂಟೆ ತಡವಾಗಿ ಮತದಾನ ಪ್ರ್ರಾರಂಭವಾಯಿತು.
ಕಿನ್ನಿಗೋಳಿ ಸಮೀಪದ ಪಂಜ ಮತದಾನ ಕೇಂದ್ರದಲ್ಲಿ ಮತದಾನದ ಆರಂಭದಲ್ಲೇ ಮತಯಂತ್ರ ಕೆಟ್ಟಿದ್ದ ಕಾರಣ ಸುಮಾರು ಅರ್ಧಗಂಟೆ ತಡವಾಗಿ ಮತದಾನ ಆರಂಭಗೊಂಡಿದ್ದು ಮತದಾರರು ಅಸಮಾಧಾನವ್ಯಕ್ತಪಡಿಸಿದ ಘಟನೆ ನಡೆದಿದೆ.

ಕಟೀಲು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಿನ್ನಿಗೋಳಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯು ಕಳೆದ ಚುನಾವಣೆಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿದ್ದು ಆ ಚುನಾವಣೆ ಸಮಯ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು ಆದರೆ ಈ ಸಲ ಮಾತ್ರ ಸಿಸಿ ಕ್ಯಾಮಾರ ಅಳವಡಿಕೆ ಆಗಿದೆಯೋ ಎಂದು ಸೂಕ್ಷ್ಮವಾಗಿ ಅತ್ತಿಂದಿತ್ತ ಗಮನಿಸುತ್ತಿರುವುದು ಕಂಡು ಬರುತ್ತಿತ್ತು. ಆದರೆ ಸಿಸಿ ಕ್ಯಾಮಾರ ಕಾಣಿಸಲೇ ಇಲ್ಲ

ಈ ಚುನಾವಣೆಯಲ್ಲಿ ಜಿಲ್ಲಾಡಳಿತ ಎಲ್ಲಾ ಮತದಾನ ಕೇಂದ್ರಗಳಿಂದ ನೂರು ಮೀಟರ್ ಅಂತರದಲ್ಲಿ ಸುಣ್ಣದ ಗೆರೆಯ ಸೀಮಾರೇಖೆಯನ್ನೆಳೆದು ಎಲ್ಲಾ ಪಕ್ಷದ ಕಾರ್ಯಕರ್ತರ ಬೂತ್‌ಗಳು ಹಾಗೂ ವಾಹನಗಳನ್ನು ದೂರವಿರುವಂತೆ ನೋಡಿಕೊಂಡದ್ದು ವಿಶೇಷವಾಗಿತ್ತು

Comments

comments

Comments are closed.

Read previous post:
Kinnigoli-19021606
ಶ್ರೀ ಜಾರಂದಾಯ – ನೇಮೋತ್ಸ

ಮೂಲ್ಕಿ: ನಡಿಕುದ್ರು ನಂದಗೋಕುಲ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಶನಿವಾರ ಮುಂಜಾನೆ ನಡೆದ ಬಂಡಿ ಉತ್ಸವ.

Close