108 ವರ್ಷದ ಜೋಸೆಫ್ ಮಿನೇಜಸ್ ಮತದಾನ

ಕಿನ್ನಿಗೋಳಿ: ಮಂಗಳೂರು ತಾಲೂಕು ಮುಲ್ಕಿ ಹೋಬಳಿಯ ಬಳ್ಕುಂಜೆ (ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆ) ಮತಗಟ್ಟೆ ಸಂಖ್ಯೆ 78 ರಲ್ಲಿ 108 ವರ್ಷ ಪ್ರಾಯದ ಮಾಗಂದಡಿ ಬಳ್ಕುಂಜೆಯ ಜೋಸೆಪ್ ಮಿನೇಜಸ್ ಹುರುಪಿನಿಂದ ಮತದಾನ ಮಾಡಿದರು. ಇಲ್ಲಿಯವರೆಗೂ ಎಂದಿಗೂ ಮತದಾನದ ಹಕ್ಕನ್ನು ತಿರಸ್ಕರಿಸಿಲ್ಲ ನಮ್ಮ ದೇಶ ಕೊಟ್ಟ ಮತದಾನದ ಹಕ್ಕನ್ನು ಪೋಲು ಮಾಡದೆ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕೃಷಿ ಪ್ರಧಾನ ಕುಟುಂಬದಿಂದ ಬಂದ ಇವರು ಕೃಷಿಯನ್ನೆ ಕಾಯಕವನ್ನಾಗಿ ಮಾಡಿಕೊಳ್ಳುತ್ತಾ ಪ್ರಗತಿ ಪರ ಕೃಷಿಕ ಎನಿಸಿಕೊಂಡಿದ್ದರು. ತಮ್ಮ 100ನೇ ವಯಸ್ಸಿನ ವರೆಗೂ ಚರ್ಚಿಗೆ ಪ್ರಾರ್ಥನೆಗಾಗಿ ಬರುತ್ತಿದ್ದರು. ಗದ್ದೆ ತೋಟಗಳ ಕೆಲಸ ಕೂಡಾ ಮಾಡುತ್ತಿದ್ದರು. ಈಗಲೂ ತಮ್ಮ ದೈನಂದಿನ ಕೆಲಸಗಳನ್ನು ತವೇ ಮಾಡುತ್ತಾ ನಡೆದಾಡುತ್ತಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಯಾವುದೇ ಪಕ್ಷಕ್ಕಾದರೂ ಮತ ನೀಡಿ ಮತದಾನದ ಹಕ್ಕನ್ನು ತಿರಸ್ಕರಿಸುವುದು ಸರಿಯಲ್ಲ ಇದ್ದದ್ದರಲ್ಲಿ ಪ್ರಾಮಾಣಿಕ ಹಾಗೂ ಜನಪರ ಸೂಕ್ತ ಅಭ್ಯರ್ಥಿ ಯನ್ನು ಬೆಂಬಲಿಸಬೇಕು. ಯುವ ಪೀಳಿಗೆ ನಮ್ಮ ಭವಿಷ್ಯದ ಮತದಾರರು ಮುಂದಿನ ಜೀವನದಲ್ಲಿ ರಾಜಕೀಯ ದುರೀಣರು ಅಥವಾ ಸಮಾಜದ ಉನ್ನತಿಗೆ ಶ್ರಮಿಸುವವರಾಗಿದ್ದಾರೆ. ಮತದಾನದ ಬಗ್ಗೆ ಅಸಡ್ಡೆ ತೋರದೆ ದೇಶದ ಹಿತ ಕಾಯಬೇಕು ಎಂದು ಯುವ ಜನಾಂಗಕ್ಕೆ ಕಿವಿ ಮತು ಹೇಳಿದರು.

Kinnigoli-19021603

Comments

comments

Comments are closed.

Read previous post:
Kinnigoli-19021602
ಕೆ. ಎಸ್. ನರಸಿಂಹ ಸ್ವಾಮಿ ಕಾವ್ಯಾನುಸಂಧಾನ

ಕಿನ್ನಿಗೋಳಿ: ಜನಮನ್ನಣೆ ಪಡೆದಿರುವ ಕೆ. ಎಸ್ . ಸರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಅಂತಹ ಕಾವ್ಯ ಹಾಗೂ ಕೃತಿಗಳ ಅವಲೋಕನ ಮಾಡುವುದು ಅಗತ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ...

Close