ಕೆ. ಎಸ್. ನರಸಿಂಹ ಸ್ವಾಮಿ ಕಾವ್ಯಾನುಸಂಧಾನ

ಕಿನ್ನಿಗೋಳಿ: ಜನಮನ್ನಣೆ ಪಡೆದಿರುವ ಕೆ. ಎಸ್ . ಸರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಅಂತಹ ಕಾವ್ಯ ಹಾಗೂ ಕೃತಿಗಳ ಅವಲೋಕನ ಮಾಡುವುದು ಅಗತ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಮಂಗಳೂರು ಕಲ್ಕೂರ ಪ್ರತಿಷ್ಠಾನ ಹಾಗೂ ಐಕಳ ಪೊಂಪೈ ಪದವಿ ಕಾಲೇಜು ಭಾಷಾ ಸಂಘದ ಆಶ್ರಯದಲ್ಲಿ ಗುರುವಾರ ಕಾಲೇಜಿನ ಸಂಭಾಂಗಣದಲ್ಲಿ ನಡೆದ ಕೆ. ಎಸ್. ನರಸಿಂಹ ಸ್ವಾಮಿ ಅವರ ಕಾವ್ಯಾನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿ ನರಸಿಂಹ ಸ್ವಾಮಿಯವರ ಪ್ರಗತಿಶೀಲ, ನವ್ಯ, ನವೋದಯ ಕೃತಿಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದರು.
ಐಕಳ ಪೊಂಪೈ ಪದವಿ ಕಾಲೇಜು ಪ್ರಿನಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಅಧ್ಯಕ್ಷತೆ ವಹಿಸಿದ್ದರು. ಕಲ್ಕೂರ ಪ್ರತಿಷ್ಠಾನದ ನಿರ್ದೇಶಕ ವಿಜಯಲಕ್ಷ್ಮೀ ಬಿ. ಶೆಟ್ಟಿ , ಜನಾರ್ದನ ಹಂದೆ ಉಪಸ್ಥಿತರಿದ್ದರು.
ಐಕಳ ಪೊಂಪೈ ಪದವಿ ಕಾಲೇಜು ಭಾಷಾ ಸಂಘದ ನಿರ್ದೇಶಕಿ ಡಾ. ಪ್ರೀಡಾ ಡಿಸೋಜ ಸ್ವಾಗತಿಸಿದರು. ಡಾ. ಮಂಜುನಾಥ ಎಸ್. ಎ ವಂದಿಸಿದರು. ನಿರ್ದೇಶಕ ಡಾ. ನೇಮಿಚಂದ್ರ ಗೌಡ ಕಾರ್ಯಕ್ರಮ ನಿರೂಪಿಸಿದರು.

Kinnigoli-19021602

Comments

comments

Comments are closed.

Read previous post:
Kinnigoli 19021601
ಪುನರೂರು : 9 ನೇ ಸ್ವಲಾತ್

ಕಿನ್ನಿಗೋಳಿ: ಕಿನ್ನಿಗೋಳಿ ಪುನರೂರು ಮುಹಮ್ಮದಿಯಾ ಜುಮ್ಮಾ ಮಸೀದಿ ಹಾಗೂ ಮುಹ್‌ಯದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ 9 ನೇ ಸ್ವಲಾತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಹಾಗೂ ಖಾಝೀ ಸ್ವೀಕಾರ...

Close