ಕೆರೆಕಾಡು ಸಾಮೂಹಿಕ ವಿವಾಹ

ಕಿನ್ನಿಗೋಳಿ: ಸಾದಾತ್ ವಲೀ ಮಾಳೂರು ಗೋರಿಹಕ್ಕಲು ಸಹಾಯಾರ್ಥದಿಂದ ನಡೆಸಿಕೊಂಡು ಬರುತ್ತಿರುವ ಸಾದಾತ್ ವಲೀ ೧೧ನೇ ವಾರ್ಷಿಕ ಝಿಕರ್ ಮಜ್ಲಿಸ್, ಸಾಮೂಹಿಕ ವಿವಾಹ ಹಾಗೂ ಸೌಹಾರ್ಧ ಸಂಗಮ ಕಾರ್ಯಕ್ರಮ ಬಹುಮಾನ್ಯ ಜಬ್ಬಾರ್ ಮಸ್ತಾನ್ ಉಪ್ಪಾಪ ಮೂಳೂರು ನೇತ್ರತ್ವದಲ್ಲಿ ಭಾನುವಾರ ಕೆರೆಕಾಡುವಿನಲ್ಲಿ ನಡೆಯಿತು.
ಬೆಳಗ್ಗೆ 8 ಗಂಟೆಗೆ ಮೌಲೀದ್ ಪಾರಾಯಣ ದೊಂದಿಗೆ 6 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶೈಖುನಾ ಅಲ್ಹಾಜ್ ಅಝ್ಹರ್ ಫೈಝಿ ನೆರವೆರಿಸಿದರು.
ಕಾರ್ಯಕ್ರಮದಲ್ಲಿ ಯು.ಕೆ. ಅಝೀಝ್ ದಾರಿಮಿ ಚೊಕ್ಕಬೆಟ್ಟು, ತೋಕೂರು ಮಸೀದಿಯ ಗೌರವಾಧ್ಯಕ್ಷ ಎಂ.ಎ. ವಾಹಿದ್, ಮಾಳೂರು ಸಾದಾತ್ ವಲೀಯವರ ಮುಜಾವವರಾದ ಮುನೀರ್ ಸಾಹೇಬ್, ನಝೀರ್ ಸಾಹೇಬ್, ಮುಹಮ್ಮದ್ ಎಝಾಜ್ ರೆಹಮಾನ್ ಆಶ್ರಫಿ ಬಿಲಾಲ್ ಗದಗ, ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
ಸಾಹುಲ್ ಹಮೀದ್ ಕದಿಕೆ ಪ್ರಾಸ್ತವಿಕ ಮಾತುಗಳನ್ನಾಡಿದರು.

Kinnigoli-22021604

Comments

comments

Comments are closed.

Read previous post:
Kinnigoli-22021603
ಕೊಂಡೆಲ್ತಾಯ ನೇಮೋತ್ಸವ

ಕಿನ್ನಿಗೋಳಿ: ಕಟೀಲು ಕೊಂಡೇಮೂಲ ಕೊಂಡೆಲ್ತಾಯ ಸೇವಾ ಸಮಿತಿಯ ವತಿಯಿಂದ ನೇಮೋತ್ಸವದ ಸಂದರ್ಭ ರಾಜ್ಯಪ್ರಶಸ್ತಿ ಪುರಸ್ಕೃತ ಗಿಡಿಗೆರೆ ರಾಮಕ್ಕ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯ ಈಶ್ವರ ಕಟೀಲ್, ಕಟೀಲು ಗ್ರಾ.ಪಂ....

Close