ದುಸ್ಥಿತಿಯ ಜನರನ್ನು ಗುರಿತಿಸಿ ಸಹಕಾರ

ಮೂಲ್ಕಿ: ಧರ್ಮಗುರುಗಳಾಗಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯೊಂದಿಗೆ, ಆರ್ಥಿಕ ದುಸ್ಥಿತಿಯ ಜನರನ್ನು ಗುರಿತಿಸಿ ಅವರಿಗೆ ಸಹಾಯ ಸಹಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಕಾರ್ಯ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಸಭೆಯ ಕಾರ್ಯದರ್ಶಿ ಸೆಲಿನ್ ರಾಡ್ರಿಗಸ್ ಹೇಳಿದರು.
ಮೊಗರ್‌ನಾಡು ಚರ್ಚಿನಲ್ಲಿ ವಿಗಾರ್‌ವಾರ್ ಆಗಿ ಸೇವೆಸಲ್ಲಿಸುತ್ತಿರುವ ಫಾ. ಮಥಾಯಸ್ ಪಿರೇರಾ  75ನೇ ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನಲ್ಲಿ ಭಾನುವಾರ ನಡೆದ ವಿಶೇಷ ಪೂಜೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಫಾ. ಮತಾಯಿಸ್ ಪಿರೇರಾ ರವರನ್ನು ಅಭಿನಂದಿಸಿ ಮಾತನಾಡಿದರು.
ಮೂಲ್ಕಿ ಚರ್ಚಿನ ನೂತನ ಕಟ್ಟಡ ನಿರ್ಮಾಣದ ಮುಖ್ಯಸ್ಥರಾಗಿ ಗ್ರಾಮೀಣ ಬಡ ವರ್ಗದ ಜನರಿಗೆ ಸಹಕಾರಿಯಾಗಿ ಯಾವು ನೀಡಿದ ಸೇವೆ ಜನ ಮಾನಸದದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಈ ಸಂದರ್ಭ ಮೂಲ್ಕಿ ಚರ್ಚಿನ ಧರ್ಮಗುರುಗಳಾದ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ರವರು ಫಾ. ಮಥಾಯಸ್ ಪಿರೇರಾರವರನ್ನು ಸ್ಮರಣಿಕೆಯೊಂದಿಗೆ ಗೌರವಿಸಿದರು. ಬಳಿಕ ಚರ್ಚಿನ ಧರ್ಮ ಸಭೆಯ ಹಿರಿಯರು, ವಿವಿಧ ಸಂಘಟನೆಗಳು, ಮಹಿಳಾ,ಯುವ ಹಾಗೂ ಮಕ್ಕಳ ಸಂಘಟನೆಗಳಿಂದ ಗೌರವಿಸಲಾಯಿತು. ಮೂಲ್ಕಿ ಮೆಡಲಿನ್ ಕೊನ್ವೆಂಟ್ ವತಿಯಿಂದ ಸಿ.ನಂದಿತಾ ಗೌರವಿಸಿದರು.
ಈ ಸಂದರ್ಭ ವಾರಣಾಸಿ ಚರ್ಚಿನ ಧರ್ಮಗುರುಗಳಾದ ಫಾ.ಅಲೋಶಿಯಸ್ ಲೂವಿಸ್, ಮೆಡಲಿನ್ ಕೋನ್ವೆಂಟ್ ಸುಪೀರಿಯರ್ ಸಿ.ನಂದಿತಾ, ಮೂಲ್ಕಿ ಧರ್ಮ ಸಭೆಯ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ,ಕಾರ್ಯದರ್ಶಿ ಸೆಲಿನ್ ರಾಡ್ರಿಗಸ್ ಉಪಸ್ಥಿತರಿದ್ದರು.
ಪೌಸ್ಟಿನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Kinnigoli-22021601

Comments

comments

Comments are closed.

Read previous post:
Kinnigoli-21021601
ಗುತ್ತಕಾಡು : ಉಚಿತ ರೇಬಿಸ್ ಲಸಿ

ಕಿನ್ನಿಗೋಳಿ : ಪಶು ಸಂಗೋಪನಾ ಇಲಾಖೆ ಹಾಗೂ ನವಚೈತನ್ಯ ಫ್ರೆಂಡ್ಸ್ ಗುತ್ತಕಾಡು ಆಶ್ರಯದಲ್ಲಿ ಗುತ್ತಕಾಡು ಬಸ್ಸು ನಿಲ್ದಾಣ ಬಳಿ ಉಚಿತ ಹುಚ್ಚು ನಾಯಿ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ...

Close